Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಸೂಚನೆ : ವಾಟ್ಸಪ್ ಪದವೀಧರರು ದಯವಿಟ್ಟು ಈ ಪೋಸ್ಟ್ ಓದಬೇಡಿ. ಓದಿ ಇಲ್ಲಿ ಪ್ರತಿಕ್ರಿಯೆ ಬರೆಯಬೇಡಿ. ಇದು ಮನುಷ್ಯತ್ವಕ್ಕೆ ಪ್ರಜಾಪ್ರಭುತ್ವಕ್ಕೆ ಸ್ಪಂದಿಸುವವರೊಂದಿಗೆ ಮಾತ್ರ ಹಂಚಿಕೊಂಡಿರುವುದು.

ಸೂಚನೆ : ವಾಟ್ಸಪ್ ಪದವೀಧರರು ದಯವಿಟ್ಟು ಈ ಪೋಸ್ಟ್ ಓದಬೇಡಿ. ಓದಿ ಇಲ್ಲಿ ಪ್ರತಿಕ್ರಿಯೆ ಬರೆಯಬೇಡಿ. ಇದು ಮನುಷ್ಯತ್ವಕ್ಕೆ ಪ್ರಜಾಪ್ರಭುತ್ವಕ್ಕೆ ಸ್ಪಂದಿಸುವವರೊಂದಿಗೆ ಮಾತ್ರ ಹಂಚಿಕೊಂಡಿರುವುದು.
ಕುಸ್ತಿಪಟುಗಳು ಇಂದು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಪತ್ರವನ್ನು ಓದಿ ಕಣ್ತುಂಬಿಕೊಳ್ತು. 
ಬಹುಶಃ ಜಗತ್ತಿನಲ್ಲಿ ಭಾರತದಲ್ಲಿ ಮಾತ್ರ ನ್ಯಾಯ ಕೇಳುವವರೇ ಅಪರಾಧಿಗಳಾಗುತ್ತಾರೆ ಎಂದು ಅನಿಸುತ್ತಿದೆ. ರಕ್ಷಣೆ ನೀಡಿ, ಅವರ ನೋವಿಗೆ ಸ್ಪಂದಿಸಬೇಕಾದ ಸರ್ಕಾರ ಆರೋಪಿಯನ್ನು ಸ್ವತಃ ರಕ್ಷಿಸುವ ಪಣತೊಟ್ಟಿರುವಾಗ ಯಾರೇನು ಮಾಡಲು ಸಾಧ್ಯ ಎಂಬ ಹತಾಷ ಭಾವ ಮೂಡುತ್ತಿದೆ. ಪೋಕ್ಸೋ ಆಪಾದಿತನನ್ನು ಪ್ರಜಾಪ್ರಭುತ್ವವನ್ನು ಕಾಪಾಡಬೇಕಾದ ಅತ್ಯುನ್ನತ ಸ್ಥಳವಾದ ಲೋಕಸಭೆಗೆ ಗೌರವ ಕೊಟ್ಟು ಆಹ್ವಾನಿಸುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಸ್ವತಃ ಮಹಿಳೆಯಾಗಿ, ಪ್ರತಿಭಟನೆ ನಡೆಯುತ್ತಿರುವ ಸ್ಥಳದಿಂದ ಕೇವಲ ಎರಡೇ ಕಿ.ಮೀ ದೂರದಲ್ಲಿ ಮೌನವಾಗಿ ಕೂತಿರುವ ರಾಷ್ಟ್ರಪತಿಗಳಿರುವಂತಹ ಈ ದೇಶದಲ್ಲಿ ನ್ಯಾಯ ಮರೀಚಿಕೆಯಾಗುತ್ತಿದೆ. ನೊಂದವರ ಪರವಾಗಿ ಇರಬೇಕಾದ ದೇಶದ ಜನತೆಯಲ್ಲಿ ಬಹುಪಾಲು ಜನರು ಪಕ್ಷ ನಾಯಕನೆಂಬ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಆ ನೊಂದ ಮಹಿಳೆಯರನ್ನೇ ದೂಷಿಸುತ್ತಿರುವಾಗ ಹತಾಷೆ, ನೋವು ಸಂಕಟವನ್ನು ಅನುಭವಿಸದೇ ಬೇರೇನು ಮಾಡಲು ಸಾಧ್ಯ?
😥😥😥

Comments