Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....


ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ...

ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇರು ಆಗಿದ್ರಿಂದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಕೂಡ ಮಾಡಿದ್ದು ಶ್ಲಾಘನೀಯ ವಿಚಾರ...

ಅಲ್ಲಿಗೆ ಮೋದಿ ಫೋಟೋ ಶೂಟ್ ಮಾಡ್ಸೋಕೆ ಹೋಗಿರ್ಲಿಲ್ಲ, ಸಿದ್ದರಾಮಯ್ಯನವರು ಪಕ್ಷದ ಪ್ರಚಾರಕ್ಕೆ ತಮ್ಮ ಸಚಿವರನ್ನ ಅಲ್ಲಿಗೆ ಕಳ್ಸಿರ್ಲಿಲ್ಲ, ಅದು ಅವರವರ ಜವಾಬ್ದಾರಿ ಅದನ್ನ ಸಮರ್ಥವಾಗಿ ನಿರ್ವಹಿಸಿದ್ದಾರೆ ಅಷ್ಟೇ, ಈಗ ದುರ್ಘಟನೆಯಲ್ಲಿ ಸತ್ತವರ ಕುಟುಂಬದ ಜೊತೆ ನಾವು ಮತ್ತು ಸರ್ಕಾರಗಳು ನಿಲ್ಬೇಕು, ಅದನ್ ಬಿಟ್ಟು ಫೋಟೋ ಶೂಟಿಂಗ್ ಮಾಡ್ಸೋಕೆ ಬರ್ತಾರೆ, ಅಪಘಾತ ಮೋದಿಯಿಂದ ಆಗಿದ್ದು, ಸರ್ಕಾರವೇ ಸರಿಯಿಲ್ಲ ಅಂತ ವೈಯಕ್ತಿಕ ದ್ವೇಷದ ತೆವಲಿಗೋಸ್ಕರ ಪೋಸ್ಟ್ ಹಾಕ್ಬಾರ್ದು, ಎಲ್ಲಿ ಯಾವಾಗ ಎಷ್ಟು ವಿರೋಧ ಮಾಡ್ಬೇಕೊ ಅಷ್ಟೇ ಮಾಡ್ಬೇಕು...

ಅಂದಂಗೆ ಎಂದಿನಂತೆ ಅಪಘಾತ ನಡೆದ ನಂತರ ಆ ಸ್ಥಳಕ್ಕೆ ತಕ್ಷಣಕ್ಕೆ ತೆರಳಿ ಗಾಯಾಳುಗಳ ಜೊತೆ ನಿಂತದ್ದು ಅದೇ ಸಂಘಿಗಳು, ತಪ್ಪು ಎಲ್ರೂ ಮಾಡ್ತಾರೆ ಆದ್ರೆ ಮಾಡಿದ್ ತಪ್ಪನ್ನೇ ಪದೇ ಪದೇ ಮಾಡ್ಬಾರ್ದು, ಮೋದಿಯನ್ನ ವಿರೋಧ ಮಾಡೋಕೆ ಸಾಕಷ್ಟು ವಿಷಯಗಳಿವೆ, ಹಾಗಂತ ಸೈನಿಕರನ್ನ ಇವ್ರೇ ಸಾಯ್ಸಿದ್ರು, ರೈಲು ಅಪಘಾತ ಇವರೇ ಮಾಡ್ಸಿ ಫೋಟೋ ಶೂಟ್ ಮಾಡುಸ್ತಾರೆ ಅನ್ನುವಷ್ಟರ ಮಟ್ಟಿಗೆ ನೀವು ಮನಸಲ್ಲಿ ವಿಷ ತುಂಬ್ಕೊಂಡಿದಿರ ಅಂದ್ರೆ ನಿಮ್ದೊಂತರ ದರಿದ್ರ ಮನಸ್ಥಿತಿ ಅನ್ಬೋದು...

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

Comments