ಅಣ್ಣವ್ರು ಹೆಸರೇಳಿ ಕೆಲಸವನ್ನು ಬೆದರಿಸಿ ಮಾಡಿಸಿಕೊಳ್ಳುತ್ತಿದ್ರು, ಇದಕ್ಕೆಲ್ಲಾ ಪಾವರ್ತಮ್ಮನವರೇ ಕುಮ್ಮಕ್ಕು ಕೊಡ್ತಿದ್ರು. ಸತ್ಯ ಬಿಚ್ಚಿಟ್ಟ ಹಿರಿಯ ಕಲಾವಿದ.
ಕನ್ನಡ ಚಿತ್ರರಂಗದ ಹೆಸರು ಇಂದು ಇಂಟರ್ನ್ಯಾಷನಲ್ ಮಟ್ಟದಲ್ಲಿ ಬೆಳೆಯುತ್ತಿದ್ದರು ಕೂಡ ಇದಕ್ಕೆ ಭದ್ರಬುನಾದಿ ಹಾಕಿದ್ದು ರಾಜಕುಮಾರ್ ಅವರ ಕಾಲಘಟ್ಟ ಎಂದರೆ ಆ ಮಾತು ಸುಳ್ಳಾಗುವುದಿಲ್ಲ. ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಸೇರಿದಂತೆ ಕನ್ನಡ ಚಲನಚಿತ್ರ ರಂಗದಲ್ಲಿ ಆ ಸಮಯದಲ್ಲಿ ಇದ್ದ ನಿರ್ಮಾಪಕರು ನಿರ್ದೇಶಕರು ಇತರ ಸಹಕಲಾವಿದರು ಇವರೆಲ್ಲರ ಕಠಿಣ ಪರಿಶ್ರಮದಿಂದ ಇಂದು ನಮ್ಮ ಭಾರತದ ಹಲವು ಫಿಲಂ ಇಂಡಸ್ಟ್ರಿಗಳಲ್ಲಿ ಕನ್ನಡದ ಸ್ಥಾನವು ಕೂಡ ಮೇಲ್ಮಟ್ಟದಲ್ಲಿದೆ.
ಈ ಬಗ್ಗೆ ವಿಶೇಷ ಸಂದರ್ಶನ ಒಂದರಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಮತ್ತು ಮೂರು ಬಾರಿ ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಸಂಸ್ಥೆಯ ಅಧ್ಯಕ್ಷರಾಗಿದ್ದ ಕೆ ಸಿ ಎನ್ ಚಂದ್ರು ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಹೆಚ್ಚಾಗಿ ಡಾಕ್ಟರ್ ರಾಜಕುಮಾರ್ ಅವರ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಏನು ಎನ್ನುವುದನ್ನು ತಿಳಿಸಿದ್ದಾರೆ.
ಕೆ ಸಿ ಎನ್ ಚಂದ್ರು ಅವರ ಜೊತೆ ರಾಜಕುಮಾರ್ ಅವರಿಗೆ ಬಹಳ ಉತ್ತಮವಾದ ಬಾಂಧವ್ಯ ಇತ್ತು. ಬಬ್ರುವಾಹನ, ಹುಲಿಯ ಹಾಲಿನ ಮೇವು ಸೇರಿದಂತೆ ಹಲವು ಬ್ಲಾಕ್ ಬ್ಲಾಸ್ಟರ್ ಅಣ್ಣಾವ್ರ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಕೆಸಿಎನ್ ಚಂದ್ರು ಅವರು. ಪ್ರದರ್ಶಕರು ಮತ್ತು ವಿತರಕರು ಹಾಗೂ ಚಿತ್ರೋದ್ಯಮಿಗಳು ಆದಕಾರಣ ಎರಡು ಕುಟುಂಬದವರ ನಡುವೆ ಬಹಳ ಆತ್ಮೀಯತೆ ಇತ್ತು ಹೀಗಾಗಿ ಏನೇ ವಿಷಯ ಇದ್ದರೂ ಮುಕ್ತವಾಗಿ ಮಾತನಾಡುವ ಸಲುಗೆಯೂ ಇತ್ತು
ಹೀಗಾಗಿ ಚಲನಚಿತ್ರ ಮಂಡಳಿಗೆ ಸಮಸ್ಯೆ ಇದ್ದರೆ ಡಾಕ್ಟರ್ ರಾಜಕುಮಾರ್ ಅವರ ಬಳಿಗೆ ಹೋದಾಗ ಪಾರ್ವತಮ್ಮ ಅವರೇ ಮಾರ್ಗದರ್ಶನ ನೀಡುತ್ತಿದ್ದರಂತೆ. ಈ ಮಾತನ್ನು ಉದಾಹರಣೆಯೊಂದಿಗೆ ಅವರು ಹೇಳಿಕೊಂಡಿದ್ದಾರೆ ಎಷ್ಟೋ ಬಾರಿ ಡಾಕ್ಟರ್ ರಾಜಕುಮಾರ್ ಅವರಿಗೆ ಕೆಲವೊಂದು ವಿಷಯಗಳು ಮುಟ್ಟುತ್ತಿರಲಿಲ್ಲ, ಪಾರ್ವತಮ್ಮ ಅವರು ನಮಗೆ ಸಪೋರ್ಟ್ ಮಾಡಿ ಸಮಸ್ಯೆ ಬಗೆಹರಿಸಿ ಕೊಡುತ್ತಿದ್ದರು. ನೀವು ಸರ್ಕಾರಕ್ಕೆ ನಿಮ್ಮ ಮನವಿ ಸಲ್ಲಿಸಿ ಅವರ ಬಳಿ ಸಹಾಯ ಕೇಳಿ ನಮ್ಮ ಚಿತ್ರರಂಗಕ್ಕಾಗಿ ಏನು ಮಾಡುತ್ತಿದ್ದೀರಾ ಎಂದು ಕೇಳಿ.
ನಿಮಗೆ ಆಗಬೇಕಾದ ಕೆಲಸಗಳು ನಡೆಯದಿದ್ದಾಗ ಈ ಕೆಲಸ ಆಗದಿದ್ದರೆ ಡಾಕ್ಟರ್ ರಾಜಕುಮಾರ್ ಅವರು ಬೀದಿಗೆ ಇಳಿಯುತ್ತಾರೆ ಎಂದು ಹೇಳಿ ಆಗ ಆಗುತ್ತದೆ ಎಂದು ಕುಮ್ಮಕು ಕೊಡುತ್ತಿದ್ದರಂತೆ. ಅದೇ ರೀತಿ ಇವರು ಸಹ ಹೋಗಿ ಚಿತ್ರ ರಂಗಕ್ಕಾಗಿ ಈ ಸಹಾಯ ಮಾಡಿ ಇಲ್ಲದಿದ್ದರೆ ನಾವು ಒಪ್ಪಿಸಿದ್ದೇವೆ ಅಣ್ಣಾವ್ರು ನಮಗೆಲ್ಲ ಬೆಂಬಲವಾಗಿದ್ದರೆ ಅವರ ಜೊತೆಗೂಡಿ ನಾವು ಹೋರಾಟಕ್ಕೆ ಇಳಿಯುತ್ತೇವೆ ಎಂದು ಹೇಳುತ್ತಿದ್ದರಂತೆ. ಈ ರೀತಿ ಹೇಳಿ ಹಲವು ಕೆಲಸಗಳನ್ನು ಚಿತ್ರರಂಗಕ್ಕಾಗಿ ಮಾಡಿಸಿಕೊಂಡಿದ್ದಾರಂತೆ.
ಒಮ್ಮೆ ಡಾಕ್ಟರ್ ರಾಜಕುಮಾರ್ ಅವರನ್ನು ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ವಿಧಾನಸೌಧಕ್ಕೆ ಆಹ್ವಾನಿಸಿದ್ದರಂತೆ. ಆಗಲು ಸಹ ಅಣ್ಣಾವ್ರು ನಾನೇನೋ ಬರುತ್ತೇನೆ ಆದರೆ ಬರುವುದರಿಂದ ನಮ್ಮ ಚಿತ್ರರಂಗಕ್ಕೆ ಏನು ಮಾಡಿಕೊಡುತ್ತೀರಾ ಎಂದು ಕೇಳಿದ್ದರಂತೆ ಯಾಕೆಂದರೆ ರಾಜಕುಮಾರ್ ಅವರಿಗೆ ರಾಜಕೀಯ ಹಾಗೂ ರಾಜಕೀಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ಅಷ್ಟೊಂದು ಆಸಕ್ತಿಯೇ ಇರಲಿಲ್ಲ ಆದರೆ ರಾಜಕೀಯ ಇಲ್ಲದೆ ಕಲಾವಿದರಿಗಾಗಿ ಸಹಾಯ ಮಾಡುತ್ತಿದ್ದರಂತೆ.
ಕಲ್ಯಾಣ್ ಕುಮಾರ್ ಅವರ ಅಂತಿಮ ದಿನಗಳಲ್ಲಿ ಡಾಕ್ಟರ್ ರಾಜಕುಮಾರ್ ಅವರ ಕುಟುಂಟ ಧನ ಸಹಾಯ ಮಾಡಿದೆಯಂತೆ. ಮತ್ತು ಪಂಡರಿ ಬಾಯಿ ಅವರ ಆರೋಗ್ಯ ಕೆಟ್ಟಿದ್ದಾಗ ಪ್ರತಿ ವಾರ ಕೂಡ ಯಾರ ಬಳಿಯಾದರೂ ಹಣ ಕೊಟ್ಟು ಕಳುಹಿಸಿ ಅವರ ಆರೋಗ್ಯ ವಿಚಾರಿಸಿಕೊಂಡು ಬರಲು ಹೇಳಿ ಕಳುಹಿಸುತ್ತಿದ್ದಾರಂತೆ. ಈ ರೀತಿ ಕೇವಲ ಒಂದೆರಡು ಅಲ್ಲ ಹಲವಾರು ಕಲಾವಿದರ ಕುಟುಂಬಕ್ಕೆ ದೊಡ್ಮನೆ ಆಸರೆಯಾಗಿ ನಿಂತಿತ್ತು ಎನ್ನುವುದನ್ನು ನೆನೆಸಿಕೊಂಡಿದ್ದಾರೆ ಕೆಸಿಎನ್ ಚಂದ್ರು ಅವರು.
Comments
Post a Comment