Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

“ಸಾಯೋವರೆಗೂ ಕಲಿಯೋದಿದೆ ಎಂದುಕೊಂಡವನುಮುಂದೆ ಹೋಗ್ತಾನೆ. ಎಲ್ಲಾ ಕಲಿತಾಗಿದೆ ಅನ್ನೋನು ಸಿಕ್ಕಿಬೀಳ್ತಾನೆ"


“ಸಾಯೋವರೆಗೂ ಕಲಿಯೋದಿದೆ ಎಂದುಕೊಂಡವನು
ಮುಂದೆ ಹೋಗ್ತಾನೆ. ಎಲ್ಲಾ ಕಲಿತಾಗಿದೆ ಅನ್ನೋನು ಸಿಕ್ಕಿಬೀಳ್ತಾನೆ"

~ಗುರುನಾಥರು ( ಗುರುನಾಥರ ಸನ್ನಿಧಿಯಲ್ಲಿ)

ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ಬೆಳೆದಾಗಿನಿಂದ
ಗುರುಕೃಪೆಯಿಂದ ಒದಗಿ ಬಂದ ವಿಚಾರಗಳು, ವ್ಯಕ್ತಿಗಳು, ಪುಸ್ತಕಗಳು, ಸತ್ಸಂಗಗಳು ಅಪಾರ. ಮಹಾತ್ಮರು ಬದುಕಿರುವ ಕಾಲಘಟ್ಟದಲ್ಲಿ ನಾವು ಬದುಕಿರುವುದು ನಮ್ಮ ಸುಕೃತ ಮತ್ತು ಅಂತಹಾ ಮಹಾತ್ಮರ ಸಾನ್ನಿಧ್ಯ ದೊರಕುವುದು ಅಥವಾ ಅವರ ವಿಚಾರಧಾರೆಗಳನ್ನು ತಿಳಿದುಕೊಂಡು ಆ ದಾರಿಯಲ್ಲಿ ನಡೆಯಲು ಪ್ರಯತ್ನಿಸುವುದು ಮನುಷ್ಯ ಜನ್ಮವನ್ನು ಸದ್ವಿನಿಯೋಗಿಸಿದಂತೆ.

ಇತ್ತೀಚಿಗೆ ನಾ ಹಂಚಿಕೊಂಡ ಕನ್ನಡದ ಆಧ್ಯಾತ್ಮಿಕ ಪುಸ್ತಕಗಳಲ್ಲಿ ಮತ್ತೊಂದು ಮುಖ್ಯ ಪುಸ್ತಕ  'ಶ್ರೀ ಅನಂತರಾಮು'ರವರ "ಗುರುನಾಥ ಸನ್ನಿಧಿಯಲ್ಲಿ". ಇದು ಸಖರಾಯಪಟ್ಟಣದ ಅವಧೂತ ಗುರುಗಳಾದ ಶ್ರೀ ವೆಂಕಟಾಚಲ ಸ್ವಾಮಿಗಳ ಕುರಿತಾದ ಪುಸ್ತಕ.

ಶ್ರೀಯುತ ಅನಂತರಾಮು ಅವರು ತಾವು ಗುರುಗಳ ಜೊತೆಗಿದ್ದ ಸಂದರ್ಭದಲ್ಲಿ ನಡೆದ ಘಟನೆಗಳನ್ನು, ಪವಾಡಗಳನ್ನು, ಅಮೂಲ್ಯ ಗುರು ಉಪದೇಶಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಗುರುವಾಕ್ಯ ಅಮೃತಸಮಾನ! ಆಧ್ಯಾತ್ಮಿಕ ಸಾಧಕರಿಗೆ, ಗುರುಬಂಧುಗಳಿಗೆ, ಆಸಕ್ತರಿಗೆ ಈ ಪುಸ್ತಕದಲ್ಲಿ ಗುರು-ಶಿಷ್ಯರ ಸಂಬಂಧ, ಸಾಧನೆ, ಧರ್ಮ, ಕರ್ಮ, ಸಂಸಾರ, ಸಿದ್ಧಪುರುಷರು ಇನ್ನಿತರ ವಿಚಾರಗಳ ಬಗ್ಗೆ ಖುದ್ದು ಗುರುಗಳು ಅನೇಕ ಘಟನಾವಳಿಗಳ ಮುಖಾಂತರ ಕಾರುಣ್ಯಪೂರ್ಣವಾಗಿ, ಆತ್ಮೀಯವಾಗಿ ಉಪದೇಶಿಸಿರುವುದನ್ನು ಕಾಣಬಹುದು.

ಅವಧೂತ ಪರಂಪರೆಯಲ್ಲಿ ಗುರುಗಳ ಆಶೀರ್ವಾದ ಮತ್ತು ಉಪದೇಶಗಳು ಕೆಲವೊಮ್ಮೆ ವಿಚಿತ್ರವಾಗಿಯೂ, ವಿಲಕ್ಷಣವಾಗಿಯೂ ಕಂಡರೂ ಅದರ ಪರಿಣಾಮ "ಅನುಭವವನ್ನು ಹೊಂದಿರುವವರು" ಮಾತ್ರವೇ ಬಲ್ಲರು. ಗುರುಗಳ ಅಪಾರ ಶಿಷ್ಯವರ್ಗ ಮತ್ತು ಅವರೆಲ್ಲರ ಅನುಭವಗಳೇ ಇದಕ್ಕೆ ಸಾಕ್ಷಿ. ನನ್ನ ಕೆಲವು ಗುರುಬಂಧು ಸ್ನೇಹಿತರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದೂ ಉಂಟು.

"ಬಾಯಲ್ಲಿ ಹೇಳುವ ವೇದಾಂತಕ್ಕಿಂತ,
ವೇದಾಂತದಲ್ಲಿ ಹೇಳಿರುವಂತೆ ನಡೆಯುವುದೇ ಮುಖ್ಯ" 
- ಗುರುನಾಥರು

ಓದುಗರಿಗೆ, ಆಸಕ್ತರಿಗೆ, ಸಾಧಕರಿಗೆ , ಗುರುಬಂಧುಗಳ ನಿತ್ಯ ಪಾರಾಯಣಕ್ಕೆ ಜೊತೆ ಇರಲೇಬೇಕಾದ ಪುಸ್ತಕವಿದು.

ಲೇಖಕರಾದ ‌ಅನಂತರಾಮು ಅವರನ್ನು ಇತ್ತೀಚೆಗೆ ಭೇಟಿಯಾಗಿ,
ಗುರುನಾಥರ ಸನ್ನಿಧಿಯಲ್ಲಿ ಅವರು ಕಂಡ ಅನೇಕ ಪವಾಡಗಳು ಮತ್ತು ಗುರು ಉಪದೇಶವನ್ನು ಖುದ್ದಾಗಿ ಅವರಿಂದಲೇ ಕೇಳಿದ್ದು ನನ್ನ ಸೌಭಾಗ್ಯವೇ ಸರಿ...! ಇಂತಹ ಅಮೂಲ್ಯ ಅನುಭವಾಮೃತವನ್ನು ಪುಸ್ತಕರೂಪದಲ್ಲಿ ಕೊಟ್ಟ ಶ್ರೀಯುತ ಅನಂತರಾಮು ಅವರಿಗೂ, ಪ್ರಕಾಶಕರಾದ ಶ್ಯಾಮಸುಂದರರಾವ್ ಅವರಿಗೂ ಹೃದಯಪೂರ್ವಕ ಧನ್ಯವಾದಗಳು.

Comments