Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ನಮ್ಮ ದೇಶದ ರಾಷ್ಟ್ರ ಹಂತದ ಮತ್ತು ರಾಜ್ಯ ಹಂತದ ಬಹುದೊಡ್ಡ ಸಮಸ್ಯೆಗಳಿವು.


ಯಾವುದೇ ದೇಶ ಮುಂದುವರೆಯಬೇಕಾದರೆ ಆ ದೇಶದ ವಿದ್ಯಾವಂತ ಮತ್ತು ಅನುಕೂಲ ವರ್ಗದ ಮಂಡೆ ಆರೋಗ್ಯಕರವಾಗಿರಬೇಕು, ಚುರುಕಾಗಿರಬೇಕು, ಪ್ರಾಮಾಣಿಕವಾಗಿರಬೇಕು. ಯಾಕಂದರೆ ಬಡವರು ದುರ್ಬಲರು ಆ ಕ್ಷಣದ ಆಮಿಶಗಳಿಗೆ ಬಲಿ ಆಗ್ತಾರೆ. ಅವಿದ್ಯಾವಂತರು ಬೇರೆಯವರ ಮಾತಿನ ಮೇಲೆ ನಿಂತಿರುತ್ತಾರೆ. 

ನಮ್ಮ ದೇಶದ  ರಾಷ್ಟ್ರ ಹಂತದ ಮತ್ತು ರಾಜ್ಯ ಹಂತದ ಬಹುದೊಡ್ಡ ಸಮಸ್ಯೆಗಳು ಯಾವುವು? ಕುಳಿತು ಟಾಪ್ ತ್ರೀ ಎಂದೇ ನಿಮ್ಮ ನಿಮ್ಮ  ಪಟ್ಟಿ ಮಾಡಿ. 

ಮತಾಂತರ? ಬುರ್ಕಾ? ದನ? - ನೂರಮೂವತ್ತು ಕೋಟಿ ಜನಸಂಖ್ಯೆ ಹತ್ತಿರತ್ತಿರ ನಾಲ್ಕು ಟ್ರಿಲಿಯನ್ ಎಕಾನಮಿ ಗಾತ್ರದ ದೇಶಕ್ಕೆ ಇವಾ ಸಮಸ್ಯೆಗಳು? ಇವಕ್ಕಾ ಇಡೀ ದೇಶದ ವಿದ್ಯಾವಂತ ವರ್ಗ ಹಗಲು ರಾತ್ರಿ ಯೋಚಿಸುತ್ತ ಸಮಯ ಕಳೆಯುವುದು? 

ರಾಷ್ಟ್ರೀಯ ಭದ್ರತೆ ಒಂದು ಮುಖ್ಯ ಸಮಸ್ಯೆ ಹೌದು. ಅದಕ್ಕೆ ಪ್ರತಿ ಸರಕಾರಗಳು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿವೆ. ಈಗಾಗಲೇ ಬಿಜೆಪಿ ಅಧಿಕಾರಕ್ಕೆ ಬಂದು ಹತ್ತು ವರುಷಗಳಾಗುತ್ತ ಬಂದಿದೆ. ಸಂಸತ್ ಮೇಲಿನ(ತಿದ್ದುಪಡಿ- ಇದು ವಾಜಪೇಯಿ ಕಾಲದಲ್ಲಿ) ಮತ್ತು ತಾಜ್ ಹೊಟೆಲ್ ಮೇಲಿನ ದಾಳಿಗಳು ಕಾಂಗ್ರೆಸ್ ಸಮಯದ ಎದ್ದು ಕಾಣುವ ವೈಫಲ್ಯಗಳು. ಅಷ್ಟೇ ಗಾತ್ರದ ಅಮಾನವೀಯ ದಾಳಿಗಳು ಕಳೆದ ಹತ್ತು ವರುಷಗಳಲ್ಲಿ  ಪುಲ್ವಾಮ ಪಠಾಣ ಕೋಟ್ ಮುಂತಾಗಿ ಜರುಗಿವೆ. 1980 ರಿಂದ 2013 ರ ವರೆಗೆ 84 ಅಟ್ಯಾಕ್ಗಳು, 2014 ರಿಂದ 2022 ವರೆಗೆ 30 ಅಟ್ಯಾಕ್ ಗಳು ಆಗಿವೆ. ಸರಾಸರಿ ತಗೊಂಡರೆ ಮುಂಚೆ 2.54, ಈಗ 3.33! ಲೆಕ್ಕ ಹಾಕಿ. 1980ಯಿಂದ ಇಲ್ಲಿತನಕ ಪಾಕಿಸ್ತಾನದೊಂದಿಗೆ ಯುದ್ಧದ ತರಹ ಆಗಿರುವುದು ಎರಡು ಸಲ, ಎರಡೂ ಬಿಜೆಪಿ ಅವಧಿಯಲ್ಲಿ. ವೇದಿಕೆ ಮೇಲೆ ಉಗ್ರ ಭಾಷಣ ಕುಟ್ಟುವದರ ಹೊರತು, ಮಾಧ್ಯಮದ ಮೂಲಕ ಕ್ರಿಕೆಟ್ ಮ್ಯಾಚಿನಂತೆ ಉತ್ಪ್ರೇಕ್ಷೆಯಾಗಿ ಹೇಳಿಕೊಳ್ಳುವುದರ ಹೊರತು ಭದ್ರತೆಯಲ್ಲಿ ಇಂಪ್ರೂವ್ಮೆಂಟ್ ಆಗಿರುವುದೆಲ್ಲಿ? ಸಾಬರನ್ನು ದ್ವೇಷಿಸಿ ನಿಮ್ಮ ಮನ ತಣಿದಿದೆಯೇ ಹೊರತು ಭಯೋತ್ಪಾದಕರ ಹಾವಳಿ ಕಡಿಮೆಯಾಗಿಲ್ಲ. 

ಇನ್ನು ಎಕಾನಮಿ-2014ರಲ್ಲಿ  rate of gdp growth ಇದ್ದಿದ್ದು 7.4. 2022 ರಲ್ಲಿ ಇದ್ದಿದ್ದೂ 7 ಆಸುಪಾಸು. ಇದು ಎರಡನೆಯ ಸಂಖ್ಯೆ ಜಿಡಿಪಿ ಕ್ಯಾಲ್ಕುಲೇಶನ್ ಮಾಡುವ ತಂತ್ರವನ್ನು ಸಡಿಲಗೊಳಿಸಿದ ಬಳಿಕ. ಅಂದರೆ ಏನರ್ಥ? ಕೊರೋನದಿಂದ ಸ್ವಲ್ಪ ಹಿಂದೇಟು ಒಪ್ಪುವ. ಆದರೆ ಇದಕ್ಕೆ ಹೊಡತ ಬಿದ್ದದ್ದು ಯಾವಾಗ? ಡಿಮಾನೆಟೈಸೇಶನ್ ಆದಾಗಿಂದ. 

ಮೂರನೆಯದು ಭಾರತದ ಮರ್ಯಾದಿ ಇಮೇಜು ಅಂತನೇ ಇಟ್ಕೊಳೋಣ. ಇದನ್ನು ಹೆಂಗೆ ಅಳಿತೀರ? ಯಾವ ದೇಶದ ಯಾವ ಜನರ ಅಭಿಪ್ರಾಯಕ್ಕೆ ಬೆಲೆ? ಪಶ್ಚಿಮ ದೇಶಗಳ ದೃಷ್ಟಿಯಲ್ಲಿ ನಮ್ಮದೊಂದು ಫ್ಯಾಸಿಸ್ಟ್ ಸರಕಾರ. ಪುಟಿನ್ ಸಾಲಿನಲ್ಲಿರುವಂಥದು. ಬೇರೆ ದೇಶಗಳಲ್ಲಿ ಭಾರತೀಯರ ಮೇಲೆ ಜನಾಂಗೀಯ ನಿಂದನೆ ದಾಳಿಗಳು ಮೊದಲಿಗಿಂತ ಹೆಚ್ಚಾಗಿರುವುದು ವಾಸ್ತವ.  ಮತ್ತು ಇದಕ್ಕೆ ಕಾರಣ ಆಯಾ ದೇಶಗಳಲ್ಲಿನ ಫ್ಯಾಸಿಸ್ಟ್ ಮನೋಭಾವದ ರಾಜಕೀಯ ಬೆಳವಣಿಗೆಗಳೆಂಬುದೂ ಅಷ್ಟೇ ಸತ್ಯ. ಅಂದರೆ ನಾವು ಹೋಗಿ ಬುರ್ಕಾ ಹುಡುಗೀರ ಮೇಲೆ ಕಲ್ಲು ತೂರಿದಂಗೆ.  ಇವತ್ತೇನು ಜಾಗತಿಕ ಕಂಪನಿಗಳ ಸಿಯಿವೊ ಗಳಲ್ಲಿ ಭಾರತೀಯರು ಎದ್ದು ಕಾಣುತ್ತಾರಲ್ಲ... ಅವರೆಲ್ಲರೂ ಕಳೆದ ಇಪ್ಪತ್ತು ಮೂವತ್ತು ವರುಷ ಶ್ರಮ ಬೆವರು ಸುರಿಸಿ ಆಯಾ ಕಂಪನಿಗಳ ಏಳಿಗೆಗೆ ದುಡಿದಂಥವರು. ಅದಕ್ಕೆ ಮೋದಿ ಹೆಸರು ಬಳಿದು ನೀವು ಸಂತಸ ಪಟ್ಟರೆ ಅವರ ಶ್ರಮಕ್ಕೆ ಮಾಡುವ ಅವಮಾನ. ಯೋಗಾ-ಡೇ? ಅದೊಂದು ಪಾಸಿಂಗ್ ಕ್ಲೌಡ್. ನಾಟು ನಾಟು ಹಾಡಿಗೆ ಕೋಟಿ ಕೋಟಿ ಖರ್ಚು ಮಾಡಿ ಪ್ರಚಾರ ಮಾಡಿದಂತೆ. ಭಾರತ ನಿಜಕ್ಕೂ ಗ್ರೇಟ್ ಅನಿಸಿಕೊಳ್ಳುವುದು ಜಗತ್ತಿಗೆ ಅದರ ಕೊಡುಗೆ ಏನು ಎಂಬುದರ ಮೇಲೆ. ವೈಜ್ಞಾನಿಕ ಸಂಶೋದನೆಗಳು, ಅಂತರಿಕ್ಷ ಯೋಜನೆಗಳು, ಎಂಜಿನಿಯರಿಂಗ್ ಸೊಲುಶನ್ ಗಳು, ವೈದ್ಯಕೀಯ ರಿಸರ್ಚ್‌ಗಳು, ಜಾಗತಿಕ ಶಾಂತಿ ಕಾಪಾಡಲು ಪಡುವ ಶ್ರಮಗಳು ಇತ್ಯಾದಿಯಾಗಿ. ಸುಮ್ ಸುಮ್ನೆ ನಮ್ಮ ಬೆನ್ನು ತಟ್ಟಿಕೊಳ್ಳುವುದು ನಾರ್ಸಿಸಿಸ್ಮ್ ಆಗತ್ತೆ. ಇನ್ ಫ್ಯಾಕ್ಟ್ ಹಾಗೆ ಮಾಡೋದರಿಂದ ನಮ್ಮ ಮರ್ಯಾದಿ ಹೋಗುತ್ತೆ. ಇಮ್ಮೇಚೂರ್ ಮಂದಿ ಅಂತ. 

ರಾಜ್ಯಹಂತದ ಅಂದರೆ ದೇಶದ ಆಂತರಿಕ ಸಮಸ್ಯೆಗಳು ಯಾವುವು?

ಮೂಲಭೂತ ಸೌಕರ್ಯಗಳು- ಶುದ್ಧ ಮತ್ತು ನಮ್ಮ ಕೊಳ್ಳುವ ಶಕ್ತಿಗೆ ನಿಲುಕುವ   ಗಾಳಿ, ನೀರು, ಆಸ್ಪತ್ರೆ, ರಸ್ತೆ, ಮನೆ, ಸ್ಕೂಲು, ಕಾಲೇಜು ಇತ್ಯಾದಿಯಾಗಿ. ಅಲ್ಲೊಂದು ಇಲ್ಲೊಂದು ಟಾಲ್ ಕಟ್ಟಿಸಿಕೊಳ್ಳೋ ರಸ್ತೆಗಳು ಬಿಟ್ಟರೆ ರಾಜ್ಯ ಸರಕಾರ  ಹೊಸತಾಗಿ ಕಟ್ಟಿರುವುದು ಏನು? ನಿಮ್ಮಲ್ಲಿ ಎಷ್ಟು ಜನರಿಗೆ ಎಜುಕೇಶನ್ ತುಂಬಾ ದುಬಾರಿ ಆಗಿದೆ ಅನಿಸ್ತಿಲ್ಲ? ಆಫೀಸಿನ ಇನ್ಶೂರೆನ್ಸ್ ಇಲ್ದಿದ್ರೆ ಎಷ್ಟು ಜನ ಆಸ್ಪತ್ರೆ ವೆಚ್ಛ ಭರಿಸಬಲ್ಲಿರಿ? ಎಷ್ಟು ಜನಕ್ಕೆ ಟಾಲ್ ಗಳು ದೋಚ್ತಿವೆ ಅನ್ಸಿಲ್ಲ?   ನಾವು ಅಳೆಯಬೇಕಾಗಿರುವುದು ಇದನ್ನು ಅಲ್ವ. ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಊಟ, ಎಲ್ಲರಿಗೂ ಮನೆ- ಈ ತರಹದ ಇವರು ಕೈಗೊಂಡಿರುವ ಯೋಜನೆಗಳು ಯಾವುವು? ಎಷ್ಟರ ಮಟ್ಟಿಗೆ ಯಶಸ್ವಿಯಾಗಿದಾರೆ-  ಇವನ್ನು ನಾವು ಅಳೆಯಬೇಕು. ಇದನ್ನೆಲ್ಲ ಸರಕಾರ ಮಾಡದೇ ಹೋದರೆ ನೀವು ಹೋಗಿ ಬಡವರ ಕಷ್ಟ ನೀಗಿಸ್ತೀರಾ? ನಿಮ್ಮ ಕಷ್ಟಗಳನ್ನು ಯಾರು ನೀಗಿಸ್ತಾರೆ?    

ಎರಡನೆಯದು ಸ್ವತಂತ್ರ ಇನ್ಸ್ಟಿಟ್ಯೂಶನ್ನುಗಳು ಅಂದರೆ ಇಂಡಿಪೆಂಡಂಟ್ ಜುಡಿಶಿಯರಿ, ಮೀಡಿಯಾ, ಪೊಲೀಸು ಇತ್ಯಾದಿಯಾಗಿ.  ಅಕಸ್ಮಾತ್ ಒಬ್ಬ ಅಂಬಾನಿ ಮಗನೊ ಬಿಜೆಪಿ ಕಾಂಗ್ರೆಸ್ ಎಮ್ಮೆಲ್ಲೆ ಮಗನೋ ನಿಮಗೆ ಗುದ್ದಿ ದೈವವಶಾತ್ ನೀವು ಬದುಕಿದರೆ ನಿಮ್ಮಲ್ಲಿ ಎಷ್ಟು ಜನ ನ್ಯಾಯ ಪಡೆದುಕೊಳ್ಳಬಲ್ಲಿರಿ? ನಿಮ್ಮ ಸೈಟಿನ ಮೇಲೆ ಕಣ್ಣು ಹಾಕಿದರೆ ಎಷ್ಟು ಜನ ಬಚಾಯಿಸಿಕೊಳ್ಳಬಲ್ಲಿರಿ? ನಿಮಗೆ ಅನ್ಸುತ್ತಾ ನಮ್ಮ ಕೋರ್ಟುಗಳು ನ್ಯಾಯ ಪರವಾಗಿವೆ, ಮಾಧ್ಯಮ ಸತ್ಯ ಹೇಳ್ತಿವೆ, ಪೋಲೀಸು ನಮ್ಮಗಳ ಕಷ್ಟಗಳಿಗೆ ಆಗ್ತಾರೆ ಅಂತ? ಯಾವೊದೇ ಮಾದ್ಯಮ ಬಿಜೆಪಿ ವಿರುದ್ಧ ಹೇಳಿದರೆ ಸಾಕು ಇವರು ಮಾರಿಕೊಂಡಿದ್ದಾರೆ ಎಂದು ಹಳಿಯುತ್ತೇವೆಲ್ಲ, ಇವತ್ತಿಗೆ ಇಡೀ network18 ಅಂಬಾನಿ ಜೇಬಲ್ಲಿ ಇಡೀ quint NDTV ಅದಾನಿ ಜೊತೆಗೆ ಇದಾವೆ. ಇವರಿಬ್ಬರೂ ಯಾರ ಕೃಪೆಗೆ ಪಾತ್ರರು ಎಂಬುದು ನಿಮಗೆ ಗೊತ್ತೇ ಇದೆ. ಇದರಿಂದ ನಿಮಗೆ ಖುಷಿಯಾಗುತ್ತಾ? ಅಂದರೆ ಇವರು ಸತ್ಯವನ್ನೇ ಹೇಳ್ತಾರೆ ಅನ್ಸುತ್ತಾ ಕೃಪೆ ಇಟ್ಟವರ ಪರವಾಗಿ ಸುದ್ದಿ ಮುಟ್ಟಿಸ್ತಾರೆ ಅನ್ಸುತ್ತಾ? ನಮಗೆ ಗೊತ್ತೇ ಇರದ ಎಷ್ಟು ವೈಫಲ್ಯಗಳನ್ನು ಇವರು ಮುಚ್ಚಿಟ್ಟಿರಬಹುದು?  ಕಾಮನ್ ಸೆನ್ಸ್? ನಮಗೆ ನಾವೇ ಮೋಸ ಮಾಡ್ಕೊತಿದೀವಿ ಅನ್ಸಲ್ವಾ? ಅಂದರೆ ಸಾಬರೊಂದು ಬಿಟ್ಟು ನಿಮ್ಮ ತಲೇಲಿ ಬೇರೆ ಏನಿದೆ ಇವರ ತಪ್ಪುಗಳನ್ನು ಮನ್ನಿಸಲಿಕ್ಕೆ?

ಪ್ರಧಾನಿ ಬಂದ್ರು ನೋಡ್ರಿ ಖುಷಿ ಪಡಿ ಅಡ್ಡಿಯಿಲ್ಲ. ಅವರು ಬಂದು ಏನು ಹೇಳಿದರು, ಏನು ಆಶ್ವಾಸನೆ ಕೊಟ್ಟರು ಹಿಂದೆ ಆಗಿರೋದಕ್ಕೆ ಏನು ರೀಜನ್ ಕೊಟ್ಟರು ಇವು ಮುಖ್ಯವಾಗಬೇಕು ಅಲ್ವ.  ಕೇಂದ್ರದಲ್ಲಿ ವಿರೋಧ ಪಕ್ಷದಲ್ಲಿ ಉತ್ತಮ ನಾಯಕತ್ವ ಇಲ್ಲಾ ಅದ್ಕೇ ಮೋದಿಜಿ ಅಂತನೇ ರಾಜ್ಯದಲ್ಲಿ ನಾಯಕತ್ವವೇ ಇರದ ಪಕ್ಷವಾಗಿ ನಿಲ್ಲೋದು ಚೀಟಿಂಟ್ ಅವರ್ ಸೆಲ್ವಸ್ ಅನ್ಸಲ್ವ. ಪ್ರಧಾನಿ ತಿಳಿಸಬೇಕಾಗಿದ್ದು ಕಳೆದ ಐದು ವರುಷ ಇಂಥದು ಮಾಡಿದ್ವಿ ಮುಂದಿನ ಐದು ವರುಷ ಇಂಥದು ಮಾಡ್ತೀವಿ ಎಂಬುದುನ್ನು. ಯಾವುದೊ ಒಂದು ಸಿನಿಮಾ ಹೆಸರಿಸಿ ಅದು ನೊಡಿ, ಅದ್ರಲ್ಲಿ ಮತಾಂತರ ತೋರಿಸಿದಾರೆ, ಅದ್ಕೇ ಕಾಂಗ್ರೆಸ್ ಗೆ ಓಟ್ ಹಾಕಬೇಡಿ ಅಂತ ಹೇಳಿ ಹೋಗ್ತಾರಲ್ಲ ಕೇಳುಗರ ಮಂಡೆ ಎಲ್ಲಿದೆ? Isn't he taking you for granted? 

ಅಟ್ ಲೀಸ್ಟ್ ಮಧ್ಯಮವರ್ಗ ಮೇಲ್ಮಧ್ಯಮ ವರ್ಗಕ್ಕೇ ಏನು ಲಾಭ ಮಾಡಿದಾರೆ ಏನು ನಷ್ಟ ಮಾಡಿದ್ದಾರೆ ಅಂತಲಾದರೂ ಯೋಚಿಸಬೇಕಲ್ವ. ಬರುವ ಮಳೆಗಾಲ ರಸ್ತೆಗಳು ನದಿಗಳಾದಾಗ ಮೋದಿ ನೆನೆಸ್ಕೊಳ್ತೀರ ರಾಜ್ಯದ ಮುಖ್ಯಮಂತ್ರಿ ನೆನೆಸ್ಕೊಳ್ತೀರ? ಅಟ್ ಲೀಸ್ಟ್ ಕೇಳ್ತೀರಾ ಯಾರು ಇದನ್ನು ಸರಿಮಾಡೋದು ಅಂತ?

ನಿಮ್ಮ ತಲೇನೇನಾದರೂ ಇದು ಕಾಂಗಿ ರೈಟಪ್ಪು ಅದು ಇದು ಅಂತ ಬಂದರೆ ದೇವರೇ ಕಾಪಾಡಬೇಕು ನಿಮ್ಮನ್ನ.

Comments