Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಬಲೇ ಹುಷಾರಾಗಿರಬೇಕು ಕಣ್ರಪ್ಪ, ಎಚ್ಚರ ತಪ್ಪಿದೆವೋ‌ ಮತ್ತೆ ಚೆಡ್ಡಿಗಳು ರಾಜ್ಯಬಾರಕ್ಕೆ ಬರುತ್ತಾರೆ.


ಬಲೇ ಹುಷಾರಾಗಿರಬೇಕು  ಕಣ್ರಪ್ಪ   .. ಎಚ್ಚರ ತಪ್ಪಿದೆವೋ‌ ಮತ್ತೆ  ಚೆಡ್ಡಿಗಳು ರಾಜ್ಯಬಾರಕ್ಕೆ ಬರುತ್ತಾರೆ.
 ‌
ಇಲ್ಲೊಬ್ಬ ಸರಸ್ವತಿ ಪುತ್ರ. ,  ಇವನು  ಪ್ರಿಂಸಿಪಾಲ ಬೇರೆ ಅಂತೆ ಕೋಮುದ್ವೇಷ ಬಿತ್ತನೆಯ ಕೈಂಕರ್ಯ ನಡೆಸಿದ್ದಾನೆ ...ಇಂತಹ ಸಮಾಜ ಘಾತುಕ. , ರಾಷ್ಟ್ರ ಘಾತುಕ‌ ವ್ಯಕ್ತಿ ಮತ್ತು ಶಕ್ತಿಗಳು   ನಮ್ಮ ಸುತ್ತ ಮುತ್ತ   ಜಿದ್ದಿನಿಂದ  ಕಾರ್ಯಾಚರಣೆ ನಡೆಸುತ್ತಲೇ ಇರುತ್ತವೆ ...(  ಪಕ್ಷಾವಾರು Vote share  ಮತ್ತು ಜಾತಿವಾರು  ಪಕ್ಷಗಳ ಆಯ್ಕೆಯ  ಅಂಕಿ ಅಂಶ ಮತ್ತು  ಗ್ರಾಫ್ ಗಳನ್ನು  ನೋಡಬಹುದು ) 

ವಿಪ್ರ ,   ವೈಶ್ಯ , ಜೈನ  , ಲಿಂಗವಂತ,  ವಕ್ಕಲಿಗಾದಿ ಮೇಲ್ಜಾತಿಗಳು  ; ಮಿಕ್ಕ ಮದ್ಯಮ ಸ್ಪೃಶ್ಯ ಜಾತಿಗಳು  ;  ಎಸ್ಟಿಗಳ ಬಹು ಬಾಗ ;  ಎಸ್ಸಿಗಳಲ್ಲೂ  ಗಮನಾರ್ಹ ಭಾಗ. ಚೆಡ್ಡಿ ಏರಿಸಿದೆ ...

ನಮ್ಮ ಜನ ಏರಿಸಿದ  ಈ ಚೆಡ್ಡಿಯನ್ನು  ಹುಷಾರಾಗಿ ಕಿತ್ತೆಸೆಯುವ ಕೆಲಸವನ್ನು  ನಾವು ಮಾಡಬೇಕಾಗಿದೆ .. ಅದು  ಸವಾಲಿನ .  ತಾಳ್ಮೆಯ ,   ಜಾಣ್ಮೆಯ , ಪ್ರಾಜ್ಙತೆಯಿಂದ  ಮಾಡಬೇಕಾದ ಕೆಲಸ ...

ಉದಾಹರಣೆಗೆ :   ಈಗ  ಚಾಲ್ತಿಯಲ್ಲಿರುವ 'ಕೇರಳ ಸ್ಟೋರಿ ' ‌ಸಿನಿಮಾ   ಹರಡುತ್ತಿರುವ ಕೋಮು ದ್ವೇಷ ಪ್ರಸಾರದ  ವಿಚಾರ ..ಇದರಲ್ಲಿ   ಹೇಳಲಾಗಿರುವ ಅಂಶಗಳ fact check. ಮಾಡುವುದು   ನಮ್ಮ ಕರ್ತವ್ಯವಾಗುತ್ತದೆ 

ಮುಸ್ಲಿಮರ ಬಹು ಬಾಗ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿರುವವರು .‌..  ಇದು ಸಹ ಅಧ್ಯಯನ ಯೋಗ್ಯ ವಿಚಾರ ..  ಮುಲ್ಲಾದಿ   ಪುರೋಹಿತ ಶಾಹಿಗಳನ್ನು  ದಿಕ್ಕರಿಸಿ 
ಮುಸ್ಲಿಮರು  ಕಾಂಗ್ರೆಸ್ ಪಕ್ಷಕ್ಕೆ ಮತ ಕೊಟ್ಟಿರಬಹುದು  .. ಯಾಕೆಂದರೆ  ಪಿಎಫ್ ಐ ಬ್ಯಾನ್ , ಎಸ್ಟಿಪಿಐ  ಸ್ಪರ್ದೆ .. ಎಲ್ಲವನ್ನೂ   ನಿರ್ಲಕ್ಷಿಸಿ  ಮುಸ್ಲಿಂ ಸಮುದಾಯ. ಕಾಂಗ್ರೆಸ್  ಪಕ್ಷಕ್ಕೆ  ನೀಡಿರುವ ಮತ ಪ್ರಜಾಪ್ರಭುತ್ವ  ದ ಮೌಲ್ಯಗಳಿಗೆ ‌, ಭಾರತದ ಸಂವಿಧಾನಕ್ಕೆ , ಸಾಂವಿಧಾನಿಕ ಮೌಲ್ಯಗಳಿಗೆ  ನೀಡಿರುವ ಹಾಗೆ ಕಾಣುತ್ತದೆ.

Comments