ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅಭಿಮಾನಿಗಳನ್ನು ದರ್ಶನ್ ತಮ್ಮ ಸೆಲೆಬ್ರೆಟೀಸ್ ಎಂದು ಕರೆಯುತ್ತಾರೆ. ಆ ಸೆಲೆಬ್ರೆಟೀಸ್‌ನ ಎದೆಯಲ್ಲಿ ತಮ್ಮ ಇಟ್ಟುಕೊಂಡಿದ್ದಾರೆ. ಎದೆ ಮೇಲೆ 'ನನ್ನ ಪ್ರೀತಿಯ ಸೆಲೆಬ್ರಿಟೀಸ್' ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟನ ಮನೆ ಸಂಭ್ರಮವನ್ನು ತಮ್ಮದೇ ಮನೆ ಸಂಭ್ರಮ ಎನ್ನುವಂತೆ ಆಚರಿಸುತ್ತಾರೆ.
ಇತ್ತೀಚೆಗೆ ದರ್ಶನ್ ಹಾಗೂ ವಿಜಯಲಕ್ಷ್ಮಿ ತಮ್ಮ 20ನೇ ವರ್ಷ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿರು. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ನೆಚ್ಚಿನ ದಂಪತಿಗೆ ಶುಭಾಶಯ ಕೋರಿದ್ದರು. ಇದೇ ವೇಳೆ ದರ್ಶನ್ ಮದುವೆಯ ಫೋಟೋಗಳು ವೈರಲ್ ಆಗ್ತಿದೆ. ಕಳೆದೆರಡು ದಿನಗಳಿಂದ ದರ್ಶನ್- ವಿಜಯಲಕ್ಷ್ಮಿ ಜೋಡಿಯ ಲಗ್ನಪತ್ರಿಕೆ, ಅರಶಿಣ ಶಾಸ್ತ್ರ, ಮದುವೆ, ರಿಸೆಪ್ಶನ್ ಫೋಟೊಗಳು ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ದರ್ಶನ್ ಧರ್ಮಸ್ಥಳದಲ್ಲಿ ತಮ್ಮ ಮದುವೆ ನಡೆದಿದ್ದನ್ನು ನೆನಪಿಸಿಕೊಂಡಿದ್ದರು.
2003, ಮೇ 19ರಂದು ನಟ ದರ್ಶನ್, ವಿಜಯಲಕ್ಷ್ಮಿ ಕೈ ಹಿಡಿದಿದ್ದರು. ಇವರದ್ದು ಲವ್ ಕಂ ಅರೇಂಜ್ಡ್ ಮ್ಯಾರೇಜ್. ಧರ್ಮಸ್ಥಳದ ವಸಂತ್ ಮಹಲ್‌ನಲ್ಲಿ ಬಹಳ ಸರಳವಾಗಿಯೇ ಇಬ್ಬರು ಹಸೆಮಣೆ ಏರಿದ್ದರು. 18ನೇ ತಾರೀಖು ಭಾನುವಾರ ಸಂಜೆ ರಿಸೆಪ್ಷನ್, 19 ನೇ ತಾರೀಖು ಸೋಮವಾರ ಧಾರೆ ನೆರವೇರಿತ್ತು. ಅದಾಗಲೇ ದರ್ಶನ್ ಹೀರೊ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಗಷ್ಟೇ 'ಲಾಲಿ ಹಾಡು' ಸಿನಿಮಾ ಕೂಡ ರಿಲೀಸ್ ಆಗಿತ್ತು.
ದರ್ಶನ್- ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಅವರ ಮದುವೆಯ ಸುಂದರ ಕ್ಷಣಗಳ ಫೋಟೊಗಳು ವೈರಲ್ ಆಗ್ತಿದೆ. ಮಧು ಮಗ ದರ್ಶನ್‌ಗೆ ಅರಿಶಿನ ಹಚ್ಚಿರುವುದು, ಧಾರೆ ಸಮಯದಲ್ಲಿ ಹಾರ ಹಾಕಿ ನಿಂತಿರುವುದು, ಅತಿಥಿಗಳು ಬಂದು ಶುಭ ಕೋರಿರುವುದು, ಇನ್ನು ರಿಸೆಪ್ಷನ್‌ನಲ್ಲಿ ಮೀನಾ ತೂಗುದೀಪ್ ಇರುವಂತಹ ಫೋಟೊಗಳು ಹರಿದಾಡ್ತಿದೆ. ನೆಚ್ಚಿನ ಜೋಡಿದ ಸುಂದರ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡು ಅಭಿಮಾನಿಗಳು ವಾರ್ಷಿಕೋತ್ಸವದ ಶುಭಾಶಯ ಕೋರಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ದರ್ಶನ್ ಅಭಿಮಾನಿಗಳು #Dboss ಹ್ಯಾಷ್‌ಟ್ಯಾಗ್ ಸದಾ ಟ್ರೆಂಡಿಂಗ್‌ನಲ್ಲಿರುತ್ತದೆ. ಇದೀಗ ದರ್ಶನ್ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಅಭಿಮಾನಿಗಳ ವಾಟ್ಸಪ್ ಸ್ಟೇಟಸ್, ಫೇಸ್ಬುಕ್, ಇನ್‌ಸ್ಟಾ ಸ್ಟೋರಿಯಲ್ಲಿ ಶುಭಾಶಯಗಳ ಸಾಲುಗಳು ರಾರಾಜಿಸುತ್ತಿದೆ.
ಧರ್ಮಸ್ಥಳದಲ್ಲಿ ನಡೆದಿದ್ದ ಮದುವೆ
ಇನ್ನು ಇತ್ತೀಚೆಗೆ ಡಾ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಮದುವೆ ಸಮಾರಂಭದಲ್ಲಿ ದರ್ಶನ್ ಕೂಡ ಭಾಗಿ ಆಗಿದ್ದರು. ಈ ವೇಳೆ ಮಾತನಾಡಿದ ದರ್ಶನ್ "ಹೊಸ ಜೀವನಕ್ಕೆ ಕಾಲಿಡುತ್ತಿರುವ ಎಲ್ಲಾ 201 ಜೋಡಿಗಳಿಗೆ ಶುಭಾಶಯ. ಭಗವಂತ ನಿಮಗೆ ಆಯುಷ್ ಆರೋಗ್ಯ ಕೊಡಲಿ. ಜೀವನ ಬಹಳ ಚೆನ್ನಾಗಿರಲಿ. ಇಲ್ಲಿ ಬಂದಿರುವ ಎಲ್ಲಾ ಜೋಡಿಗಳು ಒಳ್ಳೆ ಕೆಲಸ ಮಾಡಿದ್ಧಾರೆ. ಯಾಕಂದ್ರೆ ಇವತ್ತು ಮದುವೆ ಮಾಡೋದು ಬಹಳ ಕಷ್ಟ. ಇಲ್ಲಿ ಮದುವೆಯಾದರೆ ಬಹಳ ಉಪಯೋಗ ಇದೆ. ಹೆಣ್ಣಿನ ಮನೆಯವರು ಅದು ಮಾಡಿಲ್ಲ, ಇದು ಮಾಡಿಲ್ಲ ಎಂದು ಯಾರು ಹೇಳಲ್ಲ. ಇದನ್ನು ನಾನು ಯಾಕೆ ಹೇಳ್ತೀನಿ ಅಂದ್ರೆ ನಾನು ಮದುವೆ ಮಾಡಿಕೊಂಡಿದ್ದು ಇಲ್ಲೇನೆ" ಎಂದಿದ್ದರು.
ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ 'ಕಾಟೇರ' ಚಿತ್ರೀಕರಣದಿಂದ ಕೊಂಚ ಬಿಡುವು ಪಡೆದಿದ್ದ ದರ್ಶನ್ ಶೀಘ್ರದಲ್ಲೇ ಮತ್ತೆ ಕ್ಯಾಮರಾ ಮುಂದೆ ನಿಲ್ಲಲಿದ್ದಾರೆ. ಚುನಾವಣೆಯಲ್ಲಿ ಮತ ಚಲಾಯಿಸಿ ನೇರವಾಗಿ ಉತ್ತರಕಾಂಡಕ್ಕೆ ದರ್ಶನ್ ಹೋಗಿದ್ದರು. ಅಲ್ಲಿನ ಹುಲಿ ಅಭಯಾರಣ್ಯದಲ್ಲಿ ಸ್ನೇಹಿತರ ಜೊತೆ ವೈಲ್ಡ್‌ಲೈಫ್ ಫೋಟೊಗ್ರಫಿ ಮಾಡಿ ಖುಷಿಪಟ್ಟಿದ್ದರು. ಈಗ ಮತ್ತೆ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ.
Comments
Post a Comment