Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಬಂಗಾಳಿ ರಂಗಭೂಮಿಯ ಪ್ರಸಿದ್ಧ ನಾಟಕ ಕಾರ, ಕಲ್ಕತ್ತಾದ ಪ್ರಸಿದ್ದ ಸ್ಟಾರ್ ಥಿಯೇಟರ್ ಮಾಲೀಕ ಶ್ರೀ ಗಿರೀಶಚಂದ್ರಘೋಶ್.


ಬಂಗಾಳಿ ರಂಗಭೂಮಿಯ ಧ್ರುವತಾರೆ.... 

ಇವರೊ ಮಹಾನ್  ಕುಡುಕ,  ನಾ ಕುಡಿದ ಬಾಟಲಿಗಳನ್ನು ಒಂದರಮೇಲೊಂದು ಪೇರಿಸಿಟ್ಟಿದ್ದರೆ ಹಿಮಾಲಯ ಪರ್ವತಕ್ಕಿಂತಲೂ  ಏತ್ತರ ಆಗುತ್ತಿತ್ತು ಎಂದು ಹಾಸ್ಯದಲ್ಲಿ ಹೇಳುತ್ತಿದ್ದವ , ವೃತ್ತಿಯಲ್ಲಿ ನಾಟಕಕಾರ,1893  ರ ಅಂದಿನ ದಿನಗಳಲ್ಲಿ ಶೇಕ್ಸ್ ಪಿಯರನ  ಮಾಕ್ಬೆತ್  ನಾಟಕವನ್ನು  ಬಂಗಾಳಿ ರಂಗ ಮಂಚದಲ್ಲಿ ಪ್ರಯೋಗಿಸಿದವ, ಶ್ರೀ ಶಂಕರಾಚಾರ್ಯ, ಬುದ್ಧದೇವಚರಿತ, ಪೂರ್ಣಚಂದ್ರ  ಇನ್ನೂ ಹಲವಾರು ಸಧಭಿರುಚಿಯ ನಾಟಕಗಳನ್ನು  ತನ್ನದೇ ಒಡೆತನದ   ನಾಟಕ ಕಂಪನಿಯಲ್ಲಿ  ರಂಗಪ್ರಯೋಗ ಮಾಡುತ್ತಾ ಹಲವಾರು ನಾಟಕ ಕಂಪನಿಯ ಕಾರ್ಮಿಕರಿಗೆ ಉದ್ಯೋಗವಿತ್ತವ, ಶ್ರೀ ರಾಮಕೃಷ್ಣ ಪರಮಹಂಸರು ಕೂಡ  ಆಗಾಗ  ನಾಟಕ ನೋಡಲು ಹೋಗುತ್ತಿದ್ದದುಂಟು ಇವರ ಥಿಯೇಟರ್ಗೆ,   ಶ್ರೀ ರಾಮಕೃಷ್ಣರಿಗಷ್ಟೇ ಉಚಿತ ಪ್ರವೇಶ ಜೊತೆಗೆ ಹೋದವರಬಳಿ ಹಣ ವಸೂಲಿ ಮಾಡದೇ ಬಿಟ್ಟವರಲ್ಲ, ಹೀಗೆ ಶ್ರೀ ರಾಮಕೃಷ್ಣರ ಸಂಪರ್ಕಕ್ಕೆ  ಬಂದವ, ಒಮ್ಮೆ  ಗುರುದೇವ ಶ್ರೀ ರಾಮಕೃಷ್ಣರನ್ನು ನೋಡಲು ಆಶ್ರಮ ಕ್ಕೆ ಬಂದಾಗ ಅಲ್ಲಿ  ಹರಿಯುತ್ತಿದ್ದ  ಆ ಗಂಗೆಯಲ್ಲಿ ಮುಳುಗೆದ್ದು ಬಾ ಎನ್ನುತ್ತಾರೆ , ಗಂಗೆಯಲ್ಲಿ ಮುಳುಗೆದ್ದು   ಪರಿಶುದ್ಧವಾದದ್ದು  ನಾನಾ ಅಥವಾ ನೀನಾ ಎಂದು  ಗಂಗೆಗೇ ನಗುತ್ತಾ ಪ್ರಶ್ನಿಸಿದವರು ಇವರು . ಜೀವನ ಸಂಧ್ಯಾಕಾಲದಲ್ಲಿ  ಶ್ರೀ ರಾಮಕ್ರಷ್ಣರಿಗೆ ಶರಣಾಗಿ,  ತನ್ನ ಜೀವಿತ ಕೊನೆಯ ದಿನಗಳನ್ನು ರಾಮಕೃಷ್ಣರ ಬಳಿ ಕಳೆದ ಇವ  ಬಂಗಾಳಿ ರಂಗಭೂಮಿಯ ಪ್ರಸಿದ್ಧ ನಾಟಕ ಕಾರ, ಕಲ್ಕತ್ತಾದ ಪ್ರಸಿದ್ದ ಸ್ಟಾರ್  ಥಿಯೇಟರ್  ಮಾಲೀಕ  ಶ್ರೀ  ಗಿರೀಶಚಂದ್ರಘೋಶ್.

Comments