Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಇಲ್ಲಿ ಯಾರೋ ಹೇಳ್ತಿದ್ದ ಎಲ್ಲಾ ಪುಕ್ಸಟ್ಟೆ ಕೊಟ್ಟು ಜನರನ್ನ ಮರಳು ಮಾಡಿದ್ದಾರೆ ಅಂತ...


ಇಲ್ಲಿ ಯಾರೋ ಹೇಳ್ತಿದ್ದ ಎಲ್ಲಾ ಪುಕ್ಸಟ್ಟೆ ಕೊಟ್ಟು ಜನರನ್ನ ಮರಳು ಮಾಡಿದ್ದಾರೆ ಅಂತ... 

ಇನ್ಮೇಲೆ ನೋಡು ಗುರು ಎಲ್ಲಾ ಹೆಣ್ ಮಕ್ಳು ಬಿಟ್ಟಿ ಬಸ್ ಏರಿ ಧರ್ಮಸ್ಥಳ, ಕುಕ್ಕೆ, ಗೋಕರ್ಣ, ಮುರುಡೇಶ್ವರ ಅಂತ ಹೊರಟು ಬಿಡ್ತಾರೆ ಅಂತ... 

ಸಣ್ಣ ಸಣ್ಣ ಹಳ್ಳಿಗಳಿಂದ ಬೆಳ್ಳಂಬೆಳಗ್ಗೆ ಹೊರಟು ದುಬಾರಿ ಬಸ್ ಟಿಕೆಟ್ ತೆಗೆದುಕೊಂಡು ಪ್ರಯಾಣಿಸಲಾಗದೆ ಕ್ಯಾಂಟರ್, ಲಾರಿಗಳಿಗೆ ಕೈ ಅಡ್ಡ ಹಾಕಿ, ನಗರದ ಗಾರ್ಮೆಂಟ್ಸ್, ಮತ್ತಿತರ ಕೆಲ್ಸಕ್ಕೆ ಬರುವ ಮಹಿಳೆಯರು ಇವರ ಕಣ್ಣಿಗೆ ಬಿದ್ದಿರಲಿಕ್ಕಿಲ್ಲ. 

ಕೆಲ್ಸ ಮುಗಿಸಿ ಇರುಳಲ್ಲಿ ಲಾರಿ, ಕ್ಯಾಂಟರ್ಗಳಿಗೆ ಕೈ ಅಡ್ಡ ಹಾಕಿ ಅಪಾಯವಾದರು ಅಂತಹ ವಾಹನಗಳಲ್ಲಿ ಸಂಚರಿಸುವ ಹೆಣ್ಣು ಮಕ್ಕಳ ಅಸಹಾಯಕತೆ ಎಂತದ್ದಿರಬೇಕು ಒಮ್ಮೆ ಯೋಚಿಸಿ... 

ಪುಕ್ಸಟ್ಟೆ ಕೊಟ್ಟು ಜನರನ್ನ ಹಾಳು ಮಾಡುತ್ತಿದ್ದಾರೆ ಅನ್ನುವ ಹೊಟ್ಟೆ ತುಂಬಿದ ಜನಗಳಿಗೆ ಬಡ ಜನರ ಅಸಹಾಯಕತೆ ಮತ್ತು ವಾಸ್ತವದ ಗಂಧವೂ ಇಲ್ಲ, ಸಮಗ್ರ ನೋಟವೂ ಇಲ್ಲ... 

ಐಷಾರಾಮಿ taxi ಗಳಲ್ಲಿ ಸಂಚರಿಸುವ ಮಹಿಳೆಗೆ ಕಿರುಕುಳ ನೀಡಿದ್ದು ದೊಡ್ಡ ಸುದ್ದಿಯಾಗುತ್ತೆ... Is the city safe ಅಂತ ಗಂಟೆಗಟ್ಟಲೆ ಚರ್ಚೆಯಾಗುತ್ತೆ. ಆದ್ರೆ ದಿನನಿತ್ಯ ಟ್ರಕ್, ಲಾರಿಗಳಲ್ಲಿ ಸಂಚರಿಸುವ ಅಸಹಾಯಕ ಮಹಿಳೆಯರ ಪಾಡು ಯಾರಿಗೂ ಬೇಡ...

ಒಂದಂತೂ ಖರೆ, ನಾಡಿನ ಎಲ್ಲ ಹೆಣ್ ಮಕ್ಕಳು ಪುಣ್ಯ ಕ್ಷೇತ್ರಕ್ಕೆ  ಹೋಗುವ ಭಜನಾ ಮಂಡಳಿಗಳ ಸದಸ್ಯರಲ್ಲ ...  ದುಡಿದು, ಕುಟುಂಬ ಸಾಕುವ ದಿಟ್ಟ ಮಹಿಳೆಯರಿಗೆ ಈ ಕೊಡುಗೆ... 

(ಬೆಂಗಳೂರು ಚನ್ನಪಟ್ಟಣದ ನಡುವೆ ಹದಿಮೂರು ವರ್ಷ ನಾನು ಪ್ರತಿನಿತ್ಯ ಓಡಾಡಿದ್ದೇನೆ. ಕೋರೋನ ಸಮಯದಲ್ಲಂತು ನರಕ ಯಾತನೆ ಅನುಭವಿಸಿದ್ದೆ. ದುಬಾರಿಯಲ್ಲದ ರೈಲು ಪ್ರಯಾಣ ಬಂದ್ ಆದಾಗ ಈ ಹೆಣ್ಣು ಮಕ್ಕಳು ಅನುಭವಿಸಿದ ಕಷ್ಟ ಯಾರಿಗೂ ಬೇಡ...)

Comments