Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ನಿನ್ನೆ ಕಂಡದ್ದು ಭಯಾನಕ ದೃಶ್ಯ. ನ್ಯಾನೊ‌ ಮತ್ತು ಡಸ್ಟರ್‌ಗಳು ಡಿಕ್ಕಿಯಾಗಿ, ನ್ಯಾನೊದಲ್ಲಿದ್ದವರು ಸಾಕಷ್ಟು ಗಾಯಗೊಂಡಿದ್ದರು. ನಾವು ಗಾಡಿಯಿಂದಿಳಿದು ಸಹಾಯ‌ ಮಾಡೋಣವೆಂದು ಹೋದರೆ ಎದೆ ಝಲ್ಲೆನಿಸುವ ವಾತಾವರಣ.


ನಿನ್ನೆ ಕಂಡದ್ದು ಭಯಾನಕ ದೃಶ್ಯ. ನ್ಯಾನೊ‌ ಮತ್ತು ಡಸ್ಟರ್‌ಗಳು ಡಿಕ್ಕಿಯಾಗಿ, ನ್ಯಾನೊದಲ್ಲಿದ್ದವರು ಸಾಕಷ್ಟು ಗಾಯಗೊಂಡಿದ್ದರು. ನಾವು ಗಾಡಿಯಿಂದಿಳಿದು ಸಹಾಯ‌ ಮಾಡೋಣವೆಂದು ಹೋದರೆ ಎದೆ ಝಲ್ಲೆನಿಸುವ ವಾತಾವರಣ. ಪುಟ್ಟ ಮಗು ಮುಖಕ್ಕೆ ಏಟು ತಿಂದಿತ್ತಲ್ಲದೇ ಅದರ ಒಂದು ಕೈ, ಒಂದು‌ಕಾಲು ಮುರಿದಿತ್ತು. ಹೆಂಗಸೊಬ್ಬರು ನ್ಯಾನೊದ ಮುಂದಿನ ಮತ್ತು ಹಿಂದಿನ ಸೀಟುಗಳು ನಡುವೆ ಸಿಕ್ಕು ಹಾಕಿಕೊಂಡಿದ್ದರು. ಮತ್ತೊಬ್ಬಾಕೆ ಗಾಡಿಯಿಂದ ದೂರ ಹಾರಿ‌ಬಿದ್ದಿದ್ದಳು. ಚಾಲಕನ ಸ್ಥಾನದಲ್ಲಿದ್ದವ ಗಾಡಿಯಿಂದ ದೂರದಲ್ಲಿ ಬೋರಲು ಬಿದ್ದಿದ್ದ. 

ನಮ್ಮಲ್ಲಿ ಕೆಲವರು ಆ ಹೆಂಗಸನ್ನು ಎತ್ತಲು‌ ಪ್ರಯತ್ನಿಸಿದರೆ, ಮತ್ತೊಂದಿಷ್ಟು ಜನ ಚಾಲಕನನ್ನು ಬದಿಗೆ ತರೋಣವೆಂದು ಹೋದರೆ ಆತನ ಮುಖ ಒಡೆದುಹೋಗಿತ್ತು. ಬಾಯಿಂದ ಒಂದೇ ಸಮನೆ ರಕ್ತ ಸುರಿಯುತ್ತಿತ್ತು. ಆ್ಯಂಬುಲೆನ್ಸ್ ತರಿಸಿ ಅದಕ್ಕೆ ಈ ಮೂವರನ್ನೂ ಏರಿಸಿದರೆ ಈ ದೇಹಗಳನ್ನು ಹಿಡಿದುಕೊಳ್ಳಲು ಯಾರಾದರೂ ಬೇಕಿತ್ತು.‌ ನಾನು ಮತ್ತು ಮಿತ್ರ ತಿಲಕ ಹತ್ತಿ ಕುಳಿತೆವು. ಆ್ಯಂಬುಲೆನ್ಸ್‌ನ ವೇಗಕ್ಕೆ ಗಾಯಗೊಂಡಿದ್ದ ಚಾಲಕನ ದೇಹ ಮೈಮೇಲೆ ಬರುತ್ತಿತ್ತು. ರಕ್ತ ಎಲ್ಲೆಂದರಲ್ಲಿ ಚಿಮ್ಮುತ್ತಿತ್ತು. ಇತ್ತ ಕಾಲು ಸ್ವಲ್ಪ ಅಲುಗಾಡಿದರೂ ಜೀವ ಹೋಗುವಂತೆ ಚೀರುವ ಪುಟ್ಟ ಹುಡುಗಿ. ಆಕೆಯ ತಲೆ ನೇವರಿಸುತ್ತಾ ಸಮಾಧಾನ‌ ಮಾಡುತ್ತಿದ್ದರೆ ತನ್ನ ಮತ್ತೊಂದು ಕೈಯಿಂದ ನನ್ನನ್ನು ಬಲವಾಗಿ ಹಿಡಿದುಕೊಂಡಿತು ಮಗು. ಹೃದಯ ಭಾರವಾಯ್ತು. ತುಂಬ ಗಾಯವಾಗಿಲ್ಲವೆಂದು ಒಂದು ಹೆಂಗಸನ್ನು ಅಲ್ಲೇ ಬಿಟ್ಟಿದ್ದೆವಲ್ಲ, ಆಕೆ ಗರ್ಭಿಣಿ ಎಂದು ನಮ್ಮೊಡನೆ ಆ್ಯಂಬುಲೆನ್ಸ್‌ನಲ್ಲಿದ್ದ ಮತ್ತೊಬ್ಬ ಹೆಂಗಸು ಹೇಳಿದಾಗ ಜೀವ ಚುರುಗುಟ್ಟಿತು. ಮಣಿಪಾಲಕ್ಕೆ ಒಯ್ದು ದಾಖಲಿಸಿದಾಗ ಸಮಾಧಾನವೆನಿಸಿತು. ಆದರೆ ಇಂದು ಪತ್ರಿಕೆ ಓದುವಾಗ ಮತ್ತದೇ ನೋವು ಆವರಿಸಿದೆ. ಚಾಲಕನ ಸ್ಥಾನದಲ್ಲಿದ್ದ ಇಮ್ತಿಯಾಜ್ ತೀರಿಕೊಂಡಿದ್ದಾನೆ. ಮಗು ಶಮ್ನಾ ಆರಾಮಾಗಿದೆ‌. ಕಣ್ಮುಚ್ಚಿದರೆ ಈ ದುರಂತ ಕಣ್ಣೆದುರಿಗೆ ಹಾದು ಹೋಗುತ್ತಿದೆ. ಬಹುಶಃ ಈ ಘಟನೆ ಮರೆಯಲು ಬಹಳ ಕಾಲವೇ ಬೇಕಾಗಬಹುದೇನೋ.

Comments