Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

"ಕೆಂಪೇಗೌಡ ವಿಮಾನ ನಿಲ್ದಾಣ"ದಲ್ಲಿ ನಮ್ಮ ಹೆಮ್ಮೆಯ ಕನ್ನಡ, ಕನ್ನಡಿಗರ ಕೊರತೆ ಎದ್ದು ಕಾಣುತ್ತಿತ್ತು. ಕಣ್ಣಿಗೆ ಕಂಡಷ್ಟನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ.


ಮೊನ್ನೆ ವಾರದ ಕೆಳಗೆ ಮೇಘಾಲಯಕ್ಕೆ ಪ್ರವಾಸಕ್ಕೆ ಹೊರಡಲು ಬೆಂಗಳೂರು ವಿಮಾನ ನಿಲ್ದಾಣ ಹೋಗಿದ್ದೆ. ನಾವು ಹೆಮ್ಮೆಯಿಂದ ಹೇಳುವ "ಕೆಂಪೇಗೌಡ ವಿಮಾನ ನಿಲ್ದಾಣ"ದಲ್ಲಿ ನಮ್ಮ ಹೆಮ್ಮೆಯ ಕನ್ನಡ, ಕನ್ನಡಿಗರ ಕೊರತೆ ಎದ್ದು ಕಾಣುತ್ತಿತ್ತು. ಕಣ್ಣಿಗೆ ಕಂಡಷ್ಟನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ.

1) ಇಲ್ಲಿಗೆ ಬರುವ ಬಹುತೇಕ ಪ್ರಯಾಣಿಕರು ಕನ್ನಡಿಗರು, ಕನ್ನಡ ನೆಲದಲ್ಲಿ ಬದುಕು ಕಟ್ಟಿಕೊಂಡವರು, ಕರ್ನಾಟಕಕ್ಕೆ ಪ್ರಯಾಣ ಬಂದವರು. ಹಾಗಾಗಿ ನಮ್ಮ ಕನ್ನಡ - ಕನ್ನಡತನ ಎದ್ದು ಕಾಣಬೇಕು.

2) ಚೆಕಿಂಗ್ ವಿಭಾಗದಲ್ಲಿ ಇದ್ದದ್ದು ಮಲಯಾಳಿಗಳು.

3) ಸೆಕ್ಯುರಿಟಿ ಪೂರ್ತಿ ಹಿಂದಿವಾಲಗಳ ಹಾವಳಿ.

4) ಬಹುತೇಕ ಎಲ್ಲಾ ವಿಚಾರಣಾ ಸಿಬ್ಬಂದಿ ಸೇರಿದಂತೆ, ಜಾಗದಲ್ಲಿದ್ದ ಹೋಟೆಲ್, ಫುಡ್ ಕೋರ್ಟ್ ಎಲ್ಲವೂ ಕನ್ನಡೇತರರದ್ದು.

5) ಕೊನೆಗೂ ಕನ್ನಡಿಗರು ಕಂಡಿದ್ದು ಟರ್ಮಿನಲ್ ನಿಂದ ಟರ್ಮಿನಲ್ ಸಾಗಿಸುವವರು , ಅಲ್ಲಲ್ಲಿ ಕ್ಲೀನ್ ಮಾಡುವವರು. ಆದರೆ ಅಲ್ಲಿದ್ದ ಬಸ್ ಡ್ರೈವರ್ ಹಿಂದಿಯನು! ಅಂದರೆ ಬಹುತೇಕ ದುಡ್ಡು ಮಾಡುವ ಕೆಲಸಗಳೆಲ್ಲಾ ಬೇರೆಯವರ ಪಾಲು.

ಇಷ್ಟೆಲ್ಲಾ ಗಮನಿಸಿದಾಗ ತುಂಬಾ ಬೇಜಾರು ಕೂಡ ಆಯ್ತು. ಕನ್ನಡಿಗರ ಸಾಮರ್ಥ್ಯದ ಕೊರೆತೆಯೋ, ಇಚ್ಛಾಶಕ್ತಿ ಕೊರತೆಯೋ, ಅವಕಾಶದ ಕೊರತೆಯೋ, ಶಿಕ್ಷಣದ ಕೊರತೆಯೋ, ಸ್ಪರ್ಧೆಯ ಕೊರತೆಯೋ ಗೊತ್ತಿಲ್ಲ,. ಒಟ್ಟಾರೆ ನಮ್ಮ ನೆಲದ ಬಹುತೇಕ ಉದ್ಯೋಗಗಳು ನಮ್ಮ ನೆಲದ ಮಕ್ಕಳಿಗೆ ಸಿಗುತ್ತಿಲ್ಲ.. ಇಷ್ಟೆಲ್ಲಾ ಯೋಚಿಸಿ ಸ್ವಲ್ಪ ಕೂಲ್ ಆಗೋಣ ಅಂತ ಐಸ್ ಕ್ರೀಂ ತಿನ್ನಲು ಹೋದರೆ (Airport Longue) ಅಲ್ಲಿ ಇದ್ದದ್ದು ಕೇವಲ "ಅಮೂಲ್ ಐಸ್ ಕ್ರೀಂ🤦‍♀️”. ಬೇಡವೆಂದು ಹೊರಟೆ..!

Kempegowda International Airport, B'lore

Comments