Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಸೂಕ್ಷ್ಮಜ್ಙರು ನಾಗತಿಹಳ್ಳಿಯವರ ಹೇಳಿಕೆಯ ಒಳಗೆ ಅಡಗಿರುವ ದುರುದ್ದೇಶಗಳನ್ನೂ , ಕಾಲದ ಗುಣವನ್ನರಿಯಲಾಗದ ಬೌದ್ಧಿಕ ದಾರಿದ್ರ್ಯವನ್ನೂ , ಕಿಮ್ಮತ್ತಿಲ್ಲದ ಉಚಿತ ಸಲಹೆಗಳನ್ನೂ ಗಮನಿಸಬಹುದು‌.

ಸೂಕ್ಷ್ಮಜ್ಙರು ನಾಗತಿಹಳ್ಳಿಯವರ  ಹೇಳಿಕೆಯ  ಒಳಗೆ ಅಡಗಿರುವ ದುರುದ್ದೇಶಗಳನ್ನೂ  , ಕಾಲದ  ಗುಣವನ್ನರಿಯಲಾಗದ ಬೌದ್ಧಿಕ ದಾರಿದ್ರ್ಯವನ್ನೂ ,  ಕಿಮ್ಮತ್ತಿಲ್ಲದ ಉಚಿತ ಸಲಹೆಗಳನ್ನೂ  ಗಮನಿಸಬಹುದು‌

ಮೊದಲಿಗೆ ,
ಇವರು‌  ''ಕುರುಬರು  ಇತರ . ಮುಂದುವರಿದ ಜಾತಿಗಳ ಜೊತೆಗೆ ಅದಿಕಾರದಿಂದ  ಹೊರಗಿರಬೇಕು ''  ಅನ್ನುತ್ತಿರುವುದರ ಅಂತರಂಗದ  ಉದ್ದೇಶ  ಸಿದ್ದರಾಮಯ್ಯ  ಹೊರಹೋಗಲಿ  ಎನ್ನುವುದು‌..ರಾಜಕೀಯ ಅದಿಕಾರ ಮೀಸಲಾತಿ ಅದಾರದಲ್ಲಿ  ಹಂಚಿಕೆಯಾಗುವುದಿಲ್ಲ... ಅದು  ವ್ಯಕ್ತಿ ಗಳಿಕೆ ಎಂಬ ಒಳನೋಟ  ಇಲ್ಲಿ‌ ಕಾಣೆಯಾಗಿದೆ 

ಎರಡನೆಯದು :
ಕುರುಬರ ನ್ನು ವಕ್ಕಲಿಗ  ಲಿಂಗಾಯತ ಬ್ರಾಹ್ಮಣ ಜಾತಿಗಳ ಜೊತೆಗೆ ಸೇರಿಸಿ  ' ಮೇಲಿನವರು ' ಎಂದು ಕರೆಯುವ  ಬೌದ್ದಿಕ ಕ್ರೌರ್ಯ ಹಾಗೂ  ಸಾಮಾಜಿಕ ಅಸೂಕ್ಷ್ಮತೆ .. 

ಇದು ಮುಗ್ದ ತೆಯಲ್ಲಿ ಹುಟ್ಟಿದ ಅಸೂಕ್ಷ್ಮತೆಯಾಗಿದ್ದರೆ ಒಪ್ಪಬಹುದಿತ್ತು‌.. ಆದರೆ ಇದು ಸಿದ್ದರಾಮಯ್ಯ ನವರನ್ನು ಹಣಿಯುವ ಸಂಚಿನಲ್ಲಿ‌ ಹುಟ್ಟಿಕೊಂಡ ಅಸೂಕ್ಷ್ಮತೆ ..ಹೀಗಾಗಿ  ಇದರಲ್ಲಿ  ಕ್ರೌರ್ಯ ಇದೆ 

ಅಥವಾ ಇದು ಜಾತಿ ಜಾತಿಗಳ ನಡುವೆ ಇರುವ  ಅಂತರ , ಮಾಹಿತಿ ರಹಿತತೆ ,  ಒಂದು ಜಾತಿ ಇನ್ನೊಂದರ ಸಂಬಂಧದಲ್ಲಿ  ಪರಕೀಯವಾಗಿರುವುದು  .... ಇವೆಲ್ಲವನ್ನೂ ಹೇಳುತ್ತಿರಲೂಬಹುದು‌

ಮೂರನೆಯಾಗಿ ,
ಇಲ್ಲಿ  "ಕನಿಷ್ಟ ಹತ್ತು ಪರ್ಸೆಂಟ್ ಭ್ರಷ್ಟಾಚಾರ ದಿಂದಲಾದರೂ  ದೂರವಿರಿ " ಎಂಬ ಮಾತು .. ಭ್ರಷ್ಟಾಚಾರ ವೇ ಮಹಾಪಾಪ ಎಂಬ ಓಬಿರಾಯನ‌ಕಾಲದ , ಅಪ್ಡೇಟ್ ಆಗದ   ಢೋಂಗಿ  ತಿಳುವಳಿಕೆ ..‌

ಬ್ರಷ್ಟಾಚಾರವನ್ನು‌ ಮೀರಿದ  , ಮನುಷ್ಯ ನ ಬಗ್ಗೆ  ಅಸಹನೆ  ದ್ವೇಷ. ಮತ್ತು ನಾಶವನ್ನು ಬೋದಿಸುವ  ಕೋಮುವಾದದ ಬಗ್ಗೆ ಯಾವ ಭೀತಿ‌ , ಆತಂಕಗಳೂ  ಇವರ ಉಲ್ಲೇಖಗಳಲ್ಲಿ   ಇಲ್ಲ...

ಇವರ ಮೇಷ್ಟ್ರು , ಲಂಕೇಶ್ ಅವರ ಮಗಳು ಗೌರಿಯವರ ಕಗ್ಗೊಲೆ  ಕೋಮುವಾದ ಜನ್ಯ ವಾದದ್ದು ಎಂಬ  ತಿಳುವಳಿಕೆಯೇ ಇಲ್ಲದ ಲೋಕಾಬಿರಾಮ‌ ಮನಸ್ಸೊಂದು‌ ಮಾತ್ರ ಈ ತರಹದ. ಶುಷ್ಕ‌ ಟ್ವೀಟ್ ಗಳನ್ನು ಹೊಸೆಯಬಲ್ಲಧು ...

ಗೆದ್ದವರು ಯಾವ ಬಗೆಯ. ಅತ್ಮಾವಲೋಕನ‌ಮಾಡಿಕೊಳ್ಳಬೇಕೆಂಬ ಸ್ಪಷ್ಟತೆ ಇಲ್ಲಿಲ್ಲ
ಅಂದರೆ ಕೋಮುವಾದದಿಂದ ಹಿಂದೆ ಸರಿಯುವ ಹಿತವಚನ‌ ಇಲ್ಲಿದೆಯೆಂದು ನಾವು ಊಹಿಸಬಹುದೆ ?.

ಗೊತ್ತಾಗುವುದಿಲ್ಲ....

Comments