Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ನಿರ್ದೇಶಕರೊಬ್ಬರು ಕೇರಳ ಸ್ಟೋರಿಸ್ ದ್ವೇಷ ಹರಡುವ ಸಿನಿಮಾವೆಂದು, ಮುಸ್ತಫ ಪ್ರೀತಿ ಹರಡುವ ಸಿನಿಮಾವೆಂದು ಪೋಸ್ಟ್ ಹಂಚಿಕೊಂಡಿದ್ದಾರೆ.


ನಿರ್ದೇಶಕರೊಬ್ಬರು ಕೇರಳ ಸ್ಟೋರಿಸ್ ದ್ವೇಷ ಹರಡುವ ಸಿನಿಮಾವೆಂದು, ಮುಸ್ತಫ ಪ್ರೀತಿ ಹರಡುವ ಸಿನಿಮಾವೆಂದು ಪೋಸ್ಟ್ ಹಂಚಿಕೊಂಡಿದ್ದಾರೆ.

 ನಿರ್ದೇಶಕರೇ, ನಿಮ್ಮ ಮನೆ ಮುಂದೆ ಒಂದು ಕೊಲೆ ಆಗುತ್ತೆ. ಅದು ಪತ್ರಿಕೆಯಲ್ಲಿ ವರದಿಯಾಗುತ್ತೆ. ನೀವು ಆ ಪತ್ರಕರ್ತನ ಮೇಲೆ ಜಗಳ ಕಾಯ್ತೀರಾ? ಯಾಕೆ ದ್ವೇಷ ಹರಡುವ ಸುದ್ದಿ ವರದಿ ಮಾಡಿದೆ? ಅದರ ಬದಲು ಪಾರ್ಕಿನಲ್ಲಿ ಲವ್ವರ್ಸ್ ಕೂತಿರೊ ವರದಿ ಮಾಡಿ, ಪ್ರೀತಿ ಹಂಚಬಹುದಿತ್ತಲ್ಲ ಅಂತ ಕೇಳ್ತೀರಾ? ಹಾಗೆ ಕೇರಳ ಸ್ಟೋರಿಸ್... ಅಲ್ಲಿ ಹೆಣ್ಣುಮಕ್ಕಳ ಮೇಲೆ ಪ್ರೀತಿ ಹೆಸರಿನಲ್ಲಿ ಆದ ದೌರ್ಜನ್ಯವನ್ನು ತೋರಿಸಿದ್ದಾರೆ. ನಿಮ್ಮ ಮನೆಯ ಹೆಣ್ಣು ಮಕ್ಕಳು ಆ ಬಲೆಗೆ ಬಿದ್ದು, ಭಯೋತ್ಪಾದರಿಗೆ ಮಾರಾಟವಾಗಿದ್ದರೆ, ಆಗಲೂ ನೀವು ಪ್ರೀತಿ ಹಂಚುವ ಮಾತು ಆಡ್ತಿದ್ರಾ? ಓಕೆ.... ಕೇರಳ ಸ್ಟೋರಿಸ್ ಬ್ಯಾನ್ ಮಾಡೋಣ. ಲವ್ ಜಿಹಾದ್ ಹೆಸರಲ್ಲಿ ಮತಾಂತರ ಮಾಡುತ್ತಾ, ಆ ಹೆಣ್ಷುಮಕ್ಕಳಿಗೆ ಕಿರುಕುಳ ನೀಡ್ತಾರಲ್ಲ, ಅವರಿಗೆಲ್ಲಾ ಮುಸ್ತಾಫ ಸಿನಿಮಾ ತೋರಿಸಿ ಬದಲಾಯಿಸ್ತೀರಾ? ಪ್ರಪಂಚಾದ್ಯಂತ ಮುಸ್ತಫ ಸಿನಿಮಾ ಬಿಡುಗಡೆಯಾಗಲಿ, ಭಯೋತ್ಪಾದರಿಗೆ ಸ್ಟೆಷಲ್ ಸ್ಕ್ರೀನಿಂಗ್ ಮಾಡಿ ಸಿನಿಮಾ ತೋರಿಸಿ, ಪ್ರೀತಿ ಹಂಚಿ. ಇಷ್ಟಾದ ಮೇಲೂ ಒಂದೇ ಒಂದು ಭಯೋತ್ಪಾದಕ ದಾಳಿ ನಡೆದರೆ, ಆಗ ನೀವೇ answerable ಆಗಿರ್ತೀರ. ತೇಜಸ್ವಿಯವರು ಈ ಕಥೆ ಬರೆದಾಗಲೇ ಇದನ್ನು ಯಾರಾದ್ರು ಸಿನಮಾ ಮಾಡಿ ಪ್ರೀತಿ ಹಂಚಬೇಕಿತ್ತು. ಆಗ ಕಾಶ್ಮೀರಿ ಪಂಡಿತರನ್ನು ಬಾಂಧವರು ಓಡಿಸ್ತಿರಲಿಲ್ಲ, WTC ಬಿಲ್ಡಿಂಗ್‌ಗೆ ವಿಮಾನ ನುಗುತ್ತಿರಲಿಲ್ಲ, 2008ರಲ್ಲಿ ಮುಂಬೈ ದಾಳಿ ಆಗ್ತಿರಲಿಲ್ಲ. ಛೇ, ಎಂಥ ತಪ್ತಾಯ್ತು ನಿರ್ದೇಶಕರೇ. ಹ್ಣಂ, ನನೆಪಾಯ್ತು, ನೀವು ನಿರ್ದೇಶನ ಮಾಡಿರೊ ಸಿನಿಮಾಲಿ ಕ್ಪೈಮಾಕ್ಸ್‌ನಲ್ಲಿ ಒಂದು ಸೀನ್ ಬರುತ್ತೆ. ಅದರಲ್ಲಿ ಬಾಂಬ್ ಬ್ಲಾಸ್ಟ್ ಆಗಿ ಖಳ ನಾಯಕ ಮತ್ತು ಅವನ ತಂಡದವರು ಸಾಯೋದು ಯಾಕೆ ನಿರ್ದೇಶಕರೇ? ಪ್ರೀತಿ ಬದಲು ಯಾಕೆ ದ್ವೇಷ ಹರಿಡಿದ್ದೀರಿ? ಸಮಾಜದಲ್ಲಿ ದುಷ್ಟಶಕ್ತಿಗಳು ಸಾಯಬೇಕು ಅಂತ ನೀವು ಹೇಳಿರೋದಾ? ಹಾಗಾದ್ರೆ ಕೇರಳ ಸ್ಟೋರೀಸ್ ಕೂಡ ಅದೇ ಅಲ್ವಾ? ಪ್ರೀತಿ ಹೆಸರಿನಲ್ಲಿ ಮೋಸ ಮಾಡಿ, ಕಿರುಕುಳ ನೀಡಿ, ಭಯೋತ್ಪಾದನೆಗೆ ತಳ್ತಾರೆ ಅಂತ ತಾನೆ? ಇದು ದುಷ್ಟತನ ತಾನೆ? ಇವರಿಗೆ ಶಿಕ್ಷೆ ಆಗಬೇಕಲ್ವಾ? ಇಂತವರಿಂದ ಎಚ್ಚರಿಕೆ ವಹಿಸಬೇಕಲ್ಲ?

 ಅದೇ ಅಲ್ವಾ ಆ ಸಿನಿಮಾ ಹೇಳಿರೋದು? ಪ್ರೀತಿ ಹರಡೊ ಸಿನಿಮಾ ದ್ವೇಷ ಹರಡೊ ಸಿನಿಮಾ ಅಂತೆ. ‌ಇವತ್ತು ಇಡೀ ಜಗತ್ತಿಗೆ ತಲೆ ನೋವಾಗಿರೋ ಉಗ್ರವಾದಿಗಳು ಯಾವ ಧರ್ಮದೋರು ಗೊತ್ತಲ್ವಾ ನಿರ್ದೇಶಕರೇ? ಬೇರೆ ನೆಲದಲ್ಲಿ ಬಿಡಿ, ಇವತ್ತು ಉಗ್ರವಾದಿಗಳು ತಮ್ಮದೇ ದೇಶದ ಜನರಿಗೆ ಕಿರುಕುಳ ನೀಡ್ತಿದಾರಲ್ಲ, ಇಷ್ಟ ಬಂದ ಮನೆಗೆ ನುಗ್ಗಿ ಹೆಣ್ಣು ಮಕ್ಕಳನ್ನ ಹೊತ್ಕೊಂಡು ಹೋಗ್ತಿದ್ದಾರಲ್ಲ, ಅವರಿಗೆ ನಿಮ್ಮ ಪ್ರೀತಿ ಪಾಠ ಮಾಡಿ. ಅದು ಬಿಟ್ಟು, ಸರ್ವೇ ಜನಃ ಸುಖಿನೊ ಭವಂತು ಎಂದು ಜಗತ್ತಿಗೆ ಹೇಳಿದೆ ನಮ್ಮ ಧರ್ಮಕ್ಕೆ ಪಾಠ ಮಾಡಲು ಬರ್ಬೇಡಿ. ಹಿಂದೂಗಳಾದ ನಾವು ಎಂದಿಗೂ‌ ನೀವು ನಮ್ಮ ದೇವರನ್ನ ಒಪ್ದಿದ್ರೆ, ಸಾಯಿಸ್ತೀವಿ ಅಂತ ಹೇಳಿಲ್ಲ. ಇಡೀ‌ ಪ್ರಪಂಚ ತಮ್ಮ‌ ದೇವರನ್ನ ಒಪ್ಪಬೇಕು, ಧರ್ಮಕ್ಕೋಸ್ಕರ ಸತ್ತರೆ 72 ಕನ್ಯೆಯರು ಸಿಗ್ತಾರೆ ಅಂತ ನಂಬಿಕೊಂಡು ಅಶಾಂತಿ ಸೃಷ್ಟಿ ಮಾಡ್ತಿರೋರು ಯಾರು ಎಂದು ಪ್ರಶ್ನೆ ಮಾಡಿಕೊಳ್ಳಲಿ.

Comments