Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಸಿದ್ಧರಾಮಯ್ಯ ಅವರನ್ನು ಪ್ರಪಾತಕ್ಕೆ ತಳ್ಳಲು ಹೊರಟಿರುವ ಮಬ್ಭಕ್ತರ ಬಗ್ಗೆ. ಜಗತ್ತಿನಲ್ಲಿರೋರನ್ನೆಲ್ಲ ನೀಚ, ಹುಳ ಹುಪ್ಪಟೆ ಎನ್ನುತ್ತಿರುವವರು ಓದಿ.


ನಾವೆಲ್ಲ ಸಿದ್ಧರಾಮಯ್ಯನವರು ಜೆಡಿಎಸ್ ನಲ್ಲಿದ್ದಾಗಿಂದ ಬೆಂಬಲಿಸುತ್ತ ಬಂದವರು. ಕಾರಣ ಜಾತ್ಯಾತೀತರು, ಸಂಭಾವಿತರು,  ಇರೋರಲ್ಲಿ ಉತ್ತಮ ವ್ಯಕ್ತಿ,  ಬ್ರಷ್ಟರಲ್ಲ,  ಆಡಳಿತ ಗೊತ್ತಿರುವವರು ಇತ್ಯಾದಿಯಾಗಿ.  ಅವರು ಹಾಗೆಯೇ ಇರಲಿ(ಬದಲಾಗಿದ್ದಾರೆ ಎಂಬುದು ಬೇರೆ ಮಾತು). ಆದರೆ ಕಳೆದ ಎರಡು ಮೂರು ಚುನಾವಣೆಗಳ ಅವರ ಸುತ್ತ ಮೋದಿ ಭಕ್ತರನ್ನು ಮೀರಿಸುವ ಮಬ್ಭಕ್ತರ ಕೂಟ ಬೆಳೆಯುತ್ತ ಬಂದಿರುವುದು ನಾಡಿಗೆ ನಾಡೇ ಗಮನಿಸಿದೆ.  ಕಳೆದ ಸಾರಿ ಅವರ ಸೋಲಿಗೆ ಆ ಮೂಲಕ ಕಾಂಗ್ರೆಸ್ ಸೋಲಿಗೆ ಈ ಕೂಟವೇ ಕಾರಣ ಎಂಬುದೂ ಜಗಜ್ಜಾಹೀರಾತು. 

ಈ ಸಲ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದಕ್ಕೆ ಹೊರಟಿರುವ ಅವರಿಗೆ ಯಾರಾದರೂ ಇದನ್ನು ತಲುಪಿಸಿದರೆ ಹಿಂದಿನ ಸಾರಿ ಆದ ಪ್ರಮಾದಗಳು ಮರುಕಳಿಸದಿರಬಹುದು. ಅವರಿಗೂ ಒಳ್ಳೆಯದಾಗಿ ಅವರ ಪಕ್ಷಕ್ಕೂ ಒಳ್ಳೆಯದಾಗಬಹುದು. ಆದ್ದರಿಂದ ಇಲ್ಲಿ ಹೇಳಹೊರಟಿರುವುದು ಸಿದ್ಧರಾಮಯ್ಯನವರ ಬಗ್ಗೆ ಅಲ್ಲ.

ಅವರನ್ನು ಪ್ರಪಾತಕ್ಕೆ ತಳ್ಳಲು ಹೊರಟಿರುವ ಮಬ್ಭಕ್ತರ ಬಗ್ಗೆ. ಜಗತ್ತಿನಲ್ಲಿರೋರನ್ನೆಲ್ಲ ನೀಚ, ಹುಳ ಹುಪ್ಪಟೆ ಎನ್ನುತ್ತ ನಾಲಿಗೆಯನ್ನು ಹರಿದ ಎಕ್ಕಡವನ್ನಾಗಿ ಮಾಡಿಕೊಂಡಿರುವವರ ಬಗ್ಗೆ

೧. ಕಳೆದ ಸಲ ಅವರು ಅಧಿಕಾರಕ್ಕೆ ಬಂದಾಗ, ಹಿಂದಿನ ಸರಕಾರದ ವಿರುದ್ಧ ಸಮರ್ಥವಾಗಿ ವಿರೋಧ ಪಕ್ಷದ ಕೆಲಸ ಮಾಡಿದ್ದು ಜೆಡಿಸ್. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಕುಂಡಿ ಅಡಿಯಿಂದಲೇ
ಬ್ರಷ್ಟಾಚಾರದ ದಾಖಲೆಗಳನ್ನು ಎಳೆದೆಳೆದು ತಂದು ಮಾಧ್ಯಮದ ಎದುರಿಟ್ಟು ಸರಕಾರದ ವಿರುದ್ಧ ಅಭಿಪ್ರಾಯ ರೂಪಿಸಿದ್ದರು. ಕಾಂಗ್ರೆಸ್ ನಾಲ್ಕು ವರುಷ ನಿದ್ದೆಯಲ್ಲಿದ್ದು ಕಡೆಯ ವರುಷ ಕಾಲ್ನಡಿಗೆ ಮಾಡಿದ್ದಷ್ಟೇ ಅದರ ಶ್ರೇಯಸ್ಸು. ಆದರೆ ಗೆದ್ದು ಅಧಿಕಾರಕ್ಕೆ ಬಂದದ್ದು ಅವರೇ. ೨೦೧೪ರಲ್ಲಿ ಭಕ್ತರು ಮೋದಿ ಹವಾ ಅಂದುಕೊಂಡದ್ದಕ್ಕೂ ಮಬ್ಬಕ್ತರು ಇದು ಅಹಿಂದ ಹವಾ ಎಂದುಕೊಂಡದ್ದಕ್ಕೂ ವ್ಯತ್ಯಾಸವಿಲ್ಲ. 

೨. ಜೀವನದುದ್ದಕ್ಕೂ ಶುದ್ಧಹಸ್ತರೆಂದು ಹೆಸರು ಮಾಡುತ್ತ ಬಂದ ಸಿದ್ಧರಾಮಯ್ಯನವರು ಸಾಮಾನ್ಯಜನರ ಏಕೈಕ ಆಶಾಕಿರಣದಂತಿದ್ದ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿದರು. ಇದನ್ನೇ ಯಡಿಯೂರಪ್ಪನವರೋ ಕುಮಾರಸ್ವಾಮಿಯವರೋ ಮಾಡಿದ್ದರೆ ಇವರು ಬಟ್ಟೆ ಹರಾಕ್ಕೊಂಡು ನೆಗೆದಾಡುತ್ತಿರಲಿಲ್ಲವೇ?

೩. ಸರ್ಕಾರಿ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆಯೇ ಕಡಿಮೆ. ಅನಿವಾರ್ಯವಿರುವವರು ಹೋಗ್ತಾರೆ. ಅದರಲ್ಲೇ ಕೆಲವರಿಗೆ ಮಾತ್ರ ಪ್ರವಾಸ ಯೋಜನೆ ಅಂತ ತಂದರು. ಹತ್ತರಲ್ಲಿ ಏಳು ಮಕ್ಕಳನ್ನು ಪ್ರವಾಸಕ್ಕೆ ಕರಕೊಂಡು ಹೋದರೆ ಉಳಿದ ಮೂರು ಮಕ್ಕಳು ನಮ್ಮನ್ಯಾಕೆ ಬಿಟ್ಟು ಹೋದಿರಿ ಎಂದು ಕೇಳಿದರೆ ಟೀಚರ್ ಏನು ಹೇಳಬೇಕು? ಈ ಖತರ್ನಾಕ್ ಐಡಿಯಾ ಅನ್ನು ಸಿದ್ಧರಾಮಯ್ಯನವರಿಗೆ ಕೊಟ್ಟವರು ಯಾರು? ಇದೇ ಮಬ್ಬಕ್ತರು. 

೪. ತಮ್ಮ ವೃತ್ತಿಜೀವನವನ್ನೆಲ್ಲ  ಅಹಿಂದ ವರ್ಗದ ಏಳಿಗೆಗೆ ಸವೆಸಿದ ಅಂದಿನ ಅಡ್ವೋಕೇಟ್ ಜನರಲ್ ಮಧ್ಯದಲ್ಲೇ ರಾಜೀನಾಮೆ ಕೊಟ್ಟು ಹೊರಬಂದದ್ದು ಏನಕ್ಕೆ? ಒಬ್ಬ ದಕ್ಷ ಪಾರದರ್ಶಕ ನ್ಯಾಯವಾದಿಯನ್ನು ಉಸಿರುಗಟ್ಟಿಸಿದ ವಾತಾವರಣ ಎಂಥದು?

೫. ಲಿಂಗಾಯತ ಧರ್ಮದ್ದು ಒಂದು ಸಾಮಾಜಿಕ ಚಳುವಳಿ. ಅದರ ಬಯಕೆ ಈಡೇರಬೇಕಂದರೆ ಚಳುವಳಿಯೇ ವ್ಯಾಪಕವಾಗಿ ಬೆಳೆಯಬೇಕು. ಇನ್ನೂ ಎರಡು ತಿಂಗಳಿನ ಎಳಸು ಕಂದನನ್ನು ದುರ್ಲಾಭಕ್ಕೋಸ್ಕರ ಗರ್ಭಪಾತ ಮಾಡಲು ಯಾರು ಐಡಿಯಾ ಕೊಟ್ಟದ್ದು? ಆ ಕಳಂಕವನ್ನು ಕಾಂಗ್ರೆಸ್ ಮೇಲೆ ತಂದದ್ದು ಯಾರು? 
 
೬. ಒಂದಿಡೀ ಅವಧಿ ಮುಖ್ಯಮಂತ್ರಿಯಾಗಿ ಎರಡನೇ ಅವಧಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಗೆಲುವು/ಸೋಲಿನ ಹೊಣೆ ಅವರದ್ದೇ ಆಗಿರುತ್ತದೆ. ಈ ಮಬ್ಭಕ್ತರನ್ನೇ ಸುತ್ತ ಕಟ್ಟಿಕೊಂಡು ಸೋತು ಯಾರೋ ಸೋಲಿಸಿದರು ಎಂದು ಊರಿಗೆಲ್ಲ ಹೇಳಿಕೊಂಡು ಬಂದದ್ದಲ್ಲವೇ? 

೭. ಜಾತ್ಯಾತೀತರೂ ಫ್ಯಾಸಿಸ್ಟ್ ವಿರೋಧಿಗಳೂ ಎಂದೇ ಹೆಸರು ಮಾಡಿಕೊಂಡು ಬಂದು ತಮ್ಮದೇ ಸಮ್ಮಿಶ್ರ ಸರಕಾರ ಬೀಳುವಂತೆ ಬೆಂಬಲಿಗರು ಬಿಜೆಪಿ ಬಾಗಿಲು ತಟ್ಟುವಂತೆ ಪ್ರೇರಪಿಸಿದ್ದು ಯಾರು? 

೮. ಇತ್ತೀಚೆಗೆ ಟಿಎನ್ ಎಸ್ ಸಿದ್ಧರಾಮಯ್ಯನವ ಸಂದರ್ಶನ ನಡೆಸಿದರು. ಅದರಲ್ಲಿ ಒಂದು ಕಡೆ ಸಿದ್ದರಾಮಯ್ಯನವರು ಕಿವಿಲಿ ಬೆರಳಾಡಿಸುತ್ತ ಅಲ್ಪಸಂಖ್ಯಾತರು ದಲಿತರು ಅವರದು  ಹೆಂಗಿದ್ರೂ ನಮ್ಗೇ ಓಟು  ಅಂತ ಗ್ವತ್ತಿತ್ತೂ(ಅದ್ಕೇ ಉಳಿದವರಿಗೆ ಕಾಳು ಬೀಸ್ತಿದ್ದೆವು).. ಅನ್ನೋ ತಾತ್ಸಾರ ಉಡಾಫೆ ಮಾತು ಮಾಡಿ ಕಡೆಯಲ್ಲಿ ನುಂಗಿಕೊಂಡರು. ಬೇಕಿದ್ದರೆ ಆ ವಿಡಿಯೋ ಮರುಪರಿಶೀಲಿಸಿ ನೋಡಿ. 

೯. ಕೊರಟಗೆರೆಗೆ ಕೆ ಬಿ ಸಿದ್ಧಯ್ಯನವರ ತಂಡ ಕಳಿಸಿ ಪರಮೇಶ್ವರ್ ಸೋಲುವಂತೆ ನೋಡಿಕೊಂಡದ್ದು ಯಾರು? ಎಲ್ಲಿ ಹೋಯಿತು ದಲಿತ ಕಾಳಜಿ? ಇಷ್ಟರ ಮಟ್ಟಿಗೆ ಅವರು ಬದಲಾಗುವಂತೆ ಮಾಡಿದ್ದು ಯಾರು?  

೧೦. ಆಯ್ತಪ್ಪ..ಪರಮೇಶ್ವರ್ ಗೆ ಆಡಳಿತ ಶಕ್ತಿಯಿಲ್ಲ ಎಂದೇ ಬಗೆಯೋಣ.   ಈಗಲಾದರೂ ಖರ್ಗೆಗೆ ಬಿಟ್ಟುಕೊಡಬಹುದಿತ್ತಲ್ಲವೇ? ಅವರಲ್ಲೇನೂ ಊನವಿಲ್ಲವಲ್ಲ?

೧೧. ಇಪ್ಪತ್ತು ಮೂವತ್ತು ವರುಷ ಅಧಿಕಾರದಲ್ಲಿದ್ದಾಗಿದೆ. ಈಗ ಅವರ ಉತ್ತರಾಧಿಕಾರಿಯಗಿ ಒಬ್ಬ ಭವಿಷ್ಯದ ದಲಿತ ನಾಯಕ ಒಬ್ಬ ಭವಿಷ್ಯದ ಅಲ್ಪಸಂಖ್ಯಾತ ನಾಯಕ  ಎಂದು ಯಾರಾದರೂ ಕಾಣಸಿಗುತ್ತಾರೆಯೇ? ಹಾಗೆ ಯಾರನ್ನಾದರೂ ಬೆಳೆಸಿದ್ದಾರೆಯೇ? ಟ್ರೈನಿಂಗ್? 

ಇವತ್ತಿಗೂ ನಾಡಿನಾದ್ಯಂತ ಸಿದ್ಧರಾಮಯ್ಯನವರ ಹಿಂದಿರುವುದು ಜಾತ್ಯಾತೀತ ಶಕ್ತಿಯೇ. ನಮ್ಮ ತುಮಕೂರಿನಲ್ಲಿ ಹನ್ನೊಂದರಲ್ಲಿ ಏಳು ಸೀಟು ಕಾಂಗ್ರೆಸ್ ಗೆ ಕೊಡಲಾಗಿದೆ.  ಜಾತಿ ನೋಡಿಯೇ? ಅಲ್ಲ. ಬನ್ನಿ ನಮ್ಮ ತುಮಕೂರಿಗೆ ಯಾರೆಲ್ಲ ಯಾವ ಜಾತಿಯವರೆಲ್ಲ ಅವರ ಗೆಲುವಿಗೆ ದುಡಿದಿದ್ದಾರೆ ಎಂದು ಪಟ್ಟಿ ಕೊಡುವೆ. 
ಇನ್ ಫ್ಯಾಕ್ಟ್ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ವೋಟ್ ಬ್ಯಾಂಕಾಗಿರುವುದು ದಲಿತರು. ಇಲ್ಲಿ ಫೇಸ್ಬುಕ್ಕಲ್ಲಿ ಕುಟ್ಟಿದ್ದೂ ಕುಟ್ಟಿದ್ದೇ ತಾವೇ ಬೃಹಸ್ಪತಿಗಳು ಆಂಟಿ ಫಾಸಿಸ್ಟುಗಳು  ಅಂತ.  

ಸಿದ್ದಣ್ಣ ಬಂದ್ರೆ ತಿಕಕ್ಕೆ ಹೊಡಿತಾರೆ ಎನ್ನಲು ಇದೇನು ಸಾಂಗ್ಲಿಯಾನ ಪಿಚ್ಚರೇ ಅವರೇನು ಶಂಕರ್ ನಾಗೇ? ಒಬ್ಬ ವ್ಯಕ್ತಿಗೆ ಆತನ ಗೆಲುವಿಗೆ ಆತನ ಬೆನ್ನಹಿಂದಿರುವ ಶಕ್ತಿಗೆ ಮಸಿಬಳಿಯಲು ಇಂತಹ ನಿಜವಾದ ನೀಚರಿದ್ದರೆ ಸಾಕು. ನೀರಿನಲ್ಲಿ ಹೋಮ. ಇನ್ನೊಂದು ಸಲ ಕಾಂಗ್ರೆಸ್ ಮುಳುಗಿಸ್ತಾರೆ.

Comments