Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ತನ್ನ ಪಟಾಲಂ ಕಟ್ಟಿಕೊಳ್ಳುವ ಹುನ್ನಾರ ಮಾಡಿ ಅನೇಕಾನೇಕ ಕಡೆ ಕಾಂಗ್ರೆಸ್ ಸ್ಪರ್ದಿಗಳು ಸೋಲಲು ಕಾರಣರಾದ ಡಿಕೆ ಶಿವಕುಮಾರ್ ಅವರು , ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಿಡಿದ ಹಟದಿಂದಾಗಿ ಲೋಕವೆಲ್ಲ ಆಡಿಕೊಳ್ಳುವ ಪರಿಸ್ತಿತಿ ನಿರ್ಮಾಣವಾಗುತ್ತದೆ.

ಕೆಪಿಸಿಸಿ ಗುತ್ತಿಗೆ ಹಿಡಿದು ಟಿಕೆಟ್ ಕೊಡುವಾಗ ತನ್ನ ಪಟಾಲಂ ಕಟ್ಟಿಕೊಳ್ಳುವ  ಹುನ್ನಾರ ಮಾಡಿ  ಅನೇಕಾನೇಕ  ಕಡೆ ಕಾಂಗ್ರೆಸ್ ಸ್ಪರ್ದಿಗಳು  ಸೋಲಲು ಕಾರಣರಾದ ಡಿಕೆ ಶಿವಕುಮಾರ್ ಅವರು ,  ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಿಡಿದ ಹಟದಿಂದಾಗಿ  ಲೋಕವೆಲ್ಲ ಆಡಿಕೊಳ್ಳುವ ಪರಿಸ್ತಿತಿ ನಿರ್ಮಾಣವಾಗುತ್ತಿದೆ 

ಕ್ಷೇತ್ರಕ್ಕೆ  ಪರಕೀಯರಾದ  ಅನ್ಯರನ್ನು ತಂದು ಹೇರಿದ ಹಾಗೂ  ಬಿಜೆಪಿ ಹೊರಹಾಕಿದ ಕಿರಣ್ ಕುಮಾರ್ ತರದ  ಚೆಡ್ಡಿಗಳನ್ನು ಸ್ಪರ್ದಿಗಳಾಗಿ‌ ಮಾಡಿದ. ಕಾರಣ ‍ , 
ತುಮಕೂರು  ಜಿಲ್ಲೆಯಲ್ಲೇ  ನಾಲ್ಕು  ಕ್ಷೇತ್ರಗಳು   - ತುಮಕೂರು ನಗರ , ತುಮಕೂರು ಗ್ರಾಮಾಂತರ , ಚಿಕ್ಕನಾಯಕನ ಹಳ್ಳಿ , ತುರುವೇಕೆರೆ  - ಬೇರೆ ಪಕ್ಷಗಳ‌ ಪಾಲಾದವು  .. ಮುದ್ದಹನುಮೇಗೌಡರು  ಈ ಬಂಡೆಯ ಅಡಿ‌ ಸಿಕ್ಕಿ  ತಮ್ಮ ರಾಜಕೀಯ ಜೀವನವನ್ನೇ ನಾಶ ಮಾಡಿಕೊಂಡರು   ..

ಇನ್ನು  ಬಿಜೆಪಿ ತಿರಸ್ಕರಿಸಿದ  ಶೆಟ್ಟರ್ . ಸವದಿ ಗಳೆಂಬ  ಪಕ್ಷದ  ಮೊದಲ ಮತ್ತು ಎರಡನೆ ಸಾಲಿನ  ಗೋಡ್ಸೆವಾದಿಗಳನ್ನು   ಗಾಂಧಿ  ಆದರ್ಶದ ಪಕ್ಷದ ಒಳಗೆ ಬಿಟ್ಟುಕೊಳ್ಳಲೂ  ಈ ಹಟಮಾರಿಯೇ ಕಾರಣವಾಗಿರಬಹುದೆಂಬುದನ್ನು  ಸುಲಭವಾಗಿ ಊಹಿಸಿಬಿಡಬಹುದು‌...

ಅದಕ್ಕಾಗೆ  ನಾನು  ಪದೆ ಪದೆ .. ಕೆಪಿಸಿಸಿ ಯಿಂದ ಕಾಂಗ್ರೆಸ್ ಪಕ್ಷವನ್ನು ರಕ್ಷಿಸಿಕೊಳ್ಳಲು   ಕರ್ನಾಟಕದ ಮತದಾರ ಕಾಂಗ್ರೆಸ್ ಅಬ್ಯರ್ಥಿಗಳಿಗೆ  ಓಟು ಹಾಕುವ  ಜಿದ್ದಿಗೆ ಬೀಳಬೇಕು   ಎಂದು ಬರೆದೆ ....

ಈಗ ನೋಡಿದರೆ . ಡಿಕೆ ಶಿವಕುಮಾರ್  ಮುಖ್ಯಮಂತ್ರಿ ತ್ವಕ್ಕೆ  ಹಟ ಹಿಡಿದು ಕೂತು , ಸಿದ್ದರಾಮಯ್ಯ ನವರ ವಿರುದ್ಧ  ಎಐಸಿಸಿ  ಗೆ ದೂರು ಕೊಟ್ಟು , ಸಾರ್ವಜನಿಕವಾಗಿ   ಸಲ್ಲದ   ದೃಶ್ಯಾವಳಿಗಳನ್ನು‌ ಬಿತ್ತರಿಸುತ್ತ    ಆಡಿಕೊಳ್ಳುವವರ ಮುಂದೆ ಎಡವಿ ಬಿದ್ದ ದೃಶ್ಯವನ್ನು ಸೃಷ್ಟಿಸುತ್ತಿದ್ದಾರೆ...

ಇದಂತೂ ಡಿಕೆಶಿಗಾಗಲಿ, ಪಕ್ಷಕ್ಕಾಗಲಿ  ಶೋಭೆ ತರುವ  ವಿಚಾರವಾಗಿ ಕಾಣುತ್ತಿಲ್ಲ‌..

ಈ ನಾಟಕವನ್ನೆಲ್ಲ ಕರ್ನಾಟಕದ ಕಾಂಗ್ರೆಸ್  ಪಕ್ಷಕ್ಕೆ  ಮತ ಚಲಾಯಿಸಿದ ಅಬಿಮಾನಿ ಜನಸಮೂಹ  ಬಿಟ್ಟಕಣ್ಣಿನಿಂದ ನೋಡುತ್ತಿದೆ...  

ಕಾಂಗ್ರೆಸ್ ಶಾಸಕಾಂಗ ಪಕ್ಷದ  ಬಹುಪಾಲು  ಸಿದ್ದರಾಮಯ್ಯ ನವರನ್ನು ಬೆಂಬಲಿಸುತ್ತಿರುವಾಗ  , ಇಡೀ ಜಾತ್ಯತೀತ  ಕರ್ನಾಟಕವೇ ಸಿದ್ದರಾಮಯ್ಯ ನವರ ನಾಯಕತ್ವಕ್ಕಾಗಿ ಎದುರುನೋಡುತ್ತಿರುವಾಗ , ಈ   ಪಾಳೆಗಾರಿಕೆ  , ಈ ಹಟಮಾರಿತನ ಡಿಕೆಶಿ‌  ಅವರಿಗೆ  ರಾಜಕೀಯವಾಗಿ  ಒಳಿತು‌ಮಾಡಲಾರದು‌.. ... 

ಈ ಬಾರಿಯಂತೂ  ಸಿದ್ದರಾಮಯ್ಯ ನವರು  ಮುಖ್ಯಮಂತ್ರಿ ಯಾಗುವುದು   ಕಾಲವೇ  ನಿರ್ದರಿಸಿದ  ಜನಮನದ  ಸರ್ವಾನುಮತದ ಆಯ್ಕೆ‌.. .. ಮುಂದೆ  ಡಿಕೆಶಿ  ಅವರಿಗೆ  ಅವಕಾಶ   ಅಡೆತಡೆಯಿಲ್ಲದೆ ತೆರೆದುಕೊಳ್ಳಲಿದೆ... ಕಾಲವೇ  ಅವರನ್ನು   ಅತ್ಯುನ್ನತ ಪೀಟಕ್ಜೆ  ಆಹ್ವಾನಿಸುತ್ತದೆ‌....

ಅಷ್ಟೇನೂ ಕೆಟ್ಟ ಮನುಷ್ಯ ಅಲ್ಲದ   ಮತ್ತು ಕಳೆದ ಎರಡು‌ಮೂರು ವರ್ಷಗಳಿಂದ ‌ನಿಜವಾದ ರಾಜಕೀಯ ನಾಯಕನಾಗಿ   ಒಕ್ಕಲಿಗ ಜಾತಿಯಾಚೆಗೂ ಸ್ವೀಕಾರಯೋಗ್ಯ ವ್ಯಕ್ತಿತ್ವ ಪಡೆಯುತ್ತಿರುವ ಡಿಕೆಶಿವಕುಮಾರ್ ಅವರು‌ಇದೊಂದು  ಅವದಿಗೆ  ಮುಖ್ಯಮಂತ್ರಿ ಸ್ಥಾನವನ್ನು  ಸಂಘರ್ಷದ ಕುರೂಪಿ ಸನ್ನಿವೇಶವನ್ನು ಸೃಷ್ಟಿಸದೆ ಸಿದ್ದರಾಮಯ್ಯ ನವರಿಗೆ   ಬಿಟ್ಟುಕೊಡುವುದು ವಿಹಿತವಾದದ್ದು.

Comments