Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

*ಅಕ್ಷಯ್ ಕುಮಾರ್ ಮತ್ತು ಮಸೂಡೇವಾಲೇ ಸ್ಮೈಲ್* ಹೀಗೆ ಹಲ್ಲುಗಳ ಜೊತೆ ವಸಡೂ ಕಾಣೋ ನಗು ಎಲ್ಲರಿಗೂ ಸೂಟ್ ಆಗಲ್ಲ, ಚೆಂದ ಅನ್ಸಲ್ಲ.


**ಅಕ್ಷಯ್ ಕುಮಾರ್.. ಮತ್ತು.. ಮಸೂಡೇವಾಲೇ ಸ್ಮೈಲ್**

ಹೀಗೆ ಹಲ್ಲುಗಳ ಜೊತೆ ವಸಡೂ ಕಾಣೋ ನಗು ಎಲ್ಲರಿಗೂ ಸೂಟ್ ಆಗಲ್ಲ. ಚೆಂದ ಅನ್ಸಲ್ಲ

ಆದರೆ ಅಕ್ಷಯ್ ಕುಮಾರ್ ಅದಕ್ಕೆ ಅಪವಾದ. ಅವನ ಚೂಪುಚೂಪು ಹಲ್ಲುಗಳು ನಕ್ಕಾಗ ವಸಡಿನ ಸಮೇತವಾಗಿ ಕಾಣಿಸಿ ಇನ್ನೂ ಬ್ರೈಟ್ ಅನಿಸುತ್ತದೆ ನಗು.  ತುಂಬ ಎನರ್ಜೆಟಿಕ್ ಅನಿಸುತ್ತದೆ ಆ ನಗು.
ಅವನ ಮುಖ ಹಾಗೂ ಓವರಾಲ್ ಮುಖದ ಎಲ್ಲ ಫೀಚರ್ ಗಳೂ ಚೂಪುಚೂಪಾಗಿರೋದೂ ಈ ನಗು ಚೆಂದ ಅನಿಸೋಕೆ‌ ಇನ್ನೊಂದು ಕಾರಣ ಇರಬಹುದು. ಒಟ್ಟಾರೆ ಅವನ ನಗು ಇಷ್ಟ ಆಗತ್ತೆ.

ಈ ವಿಷಯ ಈಗ ಬರೆಯೋಕೆ ಕಾರಣ 'ಸೆಲ್ಫೀ' ಸಿನಿಮಾ.
ಮಲಯಾಳಮ್ಮಿನ ಹಿಟ್ ಸಿನಿಮಾ ಡ್ರೈವಿಂಗ್ ಲೈಸೆನ್ಸ್ ಹಿಂದಿಯಲ್ಲಿ ಸೆಲ್ಫೀ ಆಗಿ ಬಂದು ಫ್ಲಾಪ್ ಕೂಡ ಆಗೋಯ್ತು. ಮಲಯಾಳಮ್ ನೋಡಿರದವರಿಗೆ ಸೆಲ್ಫೀ ಕೆಟ್ಟ ಸಿನಿಮಾ ಅನಿಸಬಾರದಿತ್ತು. ಅದ್ಯಾಕೋ ಜನ ಸಿನಿಮಾವನ್ನು ತಿರಸ್ಕರಿಸಿದರು.

ಈ ಸಿನಿಮಾದಲ್ಲಿ ಈ ನಗುವಿನ ಬಗ್ಗೆ ಒಂದು ಕ್ಯಾಶುಯಲ್ ಡೈಲಾಗ್ ಇದೆ.
ಅಕ್ಷಯ್ ಮತ್ತು ಅವನ‌ ಹೆಂಡ್ತಿ ಸರ್ರೋಗೆಸಿಯಲ್ಲಿ ಅಪ್ಪ ಅಮ್ಮ ಆಗುವ ತಯಾರಿಯಲ್ಲಿರ್ತಾರೆ. 
ನಂಗೆ ಹುಟ್ಟೋ ಮಗು ಹೇಗಿರಬಹುದು ಯಾರ್ ಥರ ಇರಬಹುದು ಅಂತ ಕುತೂಹಲ ಅಂತಾಳೆ ಹೆಂಡ್ತಿ..
ಯಾರೋ ಹಡೆದುಕೊಡ್ತಾರೆ ಅಥವಾ ಸರೋಗೆಸಿ ಅಂದ ಮಾತ್ರಕ್ಕೆ ಮಗು ಹೇಗೇಗೋ ಇರಲ್ಲ.‌ಅಲ್ಲಿ ಬಳಸಿರೋದು ನಂದೇ ಸ್ಪರ್ಮು... ನಿಂದೇ ಎಗ್ಗು... ನಮ್‌ಥರಾನೇ ಇರತ್ತೆ  ಅಂತಾನೆ ಅಕ್ಷಯ್..
ಈ ಡೈಲಾಗ್ ಕೇಳುವಾಗ ಎಷ್ಟು ಸಲೀಸಾಗಿ ಮುಜುಗರ ಅನಿಸದ ಹಾಗೆ ಇದು ಡೈಲಾಗಲ್ಲಿ ಬಂದ್ ಹೋಯ್ತಲ್ಲ ಅಂತ ಒಬ್ಬ ಬರಹಗಾರನಾಗಿ ಕಲಿಕೆಯಂತೆ ಅನಿಸ್ತು ನಂಗೆ.

ಹಾಗೇ ಮುಂದುವರಿದು... ನಿನ್ನ್ ಲುಕ್ಸ್ ಬರ್ಲಿ ನನ್ನ್ ಸ್ಮೈಲ್‌ಬರ್ಲಿ ‍‍ಚೆಂದ ಇರತ್ತೆ ಅಂತಾನೆ ಅಕ್ಕೀ.

ಹೆಂಡ್ತಿ  ಆಗ... ಏನೂ? ನಿನ್ ನಗೂನಾ? ನೋ..... ನೀನ್ ನಕ್ರೆ ವಸಡೆಲ್ಲ ಕಾಣ್ಸತ್ತಪ್ಪಾ.. ನೋ... ನಗು ಮಾತ್ರ ನಿಂದ್ ಬೇಡ ಅಂತ ಕಾಲೆಳೀತಾಳೆ..
ಅಗೇನ್...ಅಕ್ಷಯ್ ಅದಕ್ಕೆ ರಿಯಾಕ್ಟ್ ಮಾಡಿ.... ನಾನ್ ಓಪನ್ನಾಗ್ ನಗ್ತೀನಿ.‌... ನಿನ್ನ್‌ಥರ ಬಾಯಿಗೆ ಹೊಲ್ಗೆ ಹಾಕ್ಕೊಂಡವ್ರ್ ಥರ ನಗಲ್ಲ.... ಅಂತ ನಗ್ತಾನೆ..

ಹೀಗೆ ಗಂಡಹೆಂಡ್ತಿಯ ಬೆಡ್ ರೂಮ್ ಸಂಭಾಷಣೆ ಸಹಜವಾಗಿ ನಡ್ಕೊಂಡ್ ಹೋಗತ್ತೆ....

 ಡೈಲಾಗುಗಳು ಅಂದ್ರೆ ಹೀಗೆ ಫ್ರೀ ಫ್ಲೋ ಅನಿಸೋ ಹಾಗ್ ಇರ್ಬೇಕು...  ತುರುಕಿದಾರೆ ಅನಿಸ್ಬಾರ್ದು.. ಅಸಹಜ ಅನಿಸಬಾರ್ದು..
ಜೊತೆಗೆ ಅಕ್ಷಯ್ ನಗು ಆ  ಹಲ್ಲು ವಸಡಿನ ಬಗ್ಗೆ ಒಂದು ಮಾತು.. ಅಂಥ ಡೈಲಾಗು ಹೀರೋಗಳು ಅಷ್ಟು‌ ಸುಲಭಕ್ಕೆ ಒಪ್ಕೊಳೊದಿಲ್ಲ. ಇಮೇಜು ಹಾಳುಮೂಳು ನೋಡ್ತಾರೆ.
ಹಂಗಾಮಾ ಸಿನಿಮಾದಲ್ಲಿ ಅಕ್ಷಯ್ ಖನ್ನಾ ತನ್ನ ಬೋಳು ತಲೆ‌ಬಗ್ಗೆ ಟ್ರೋಲ್‌ಮಾಡಿಸ್ಕೊಂಡಿದ್ದ  ಡೈಲಾಗಲ್ಲಿ. ಅದು ಹದಿನೈದು ಇಪ್ಪತ್ತು ವರ್ಷ ಹಿಂದೆಯೇ. ಆದರೆ ನಮ್ಮವರು ಇಂಥ ಡೈಲಾಗ್ ಬರೆದ್ರೆ ಸೀದಾ ಕಟ್ ಹೇಳಿಬಿಡ್ತಾರೆ.
ಅಫ್ ಕೋರ್ಸ್ ಇಲ್ಲಿ ಅಕ್ಷಯ್ ಹಲ್ಲು ವಸಡಿನ ಕುರಿತ ಡೈಲಾಗ್ ಇಮೇಜ್ ಮೇಲೆ‌ ಪರಿಣಾಮ‌ ಬೀರೋದೇನಲ್ಲ. ಆದರೂ ಅಂಥ ಡೈಲಾಗ್ ಒಪ್ಕೊಳೋಕೆ ಹಿಂದುಮುಂದು ನೋಡೋ ಹೀರೋಗಳ‌ಮಧ್ಯ ಅಕ್ಷಯ್ ಆ‌ ಡೈಲಾಗ್ ಉಳಿಸಿಕೊಂಡಿದ್ದು ಖುಷಿ ಅನಿಸಿತು.
ಹಾ ಡ್ರೈವಿಂಗ್ ಲೈಸೆನ್ಸ್ ನೋಡಿರದವರೊಮ್ಮೆ ಸೆಲ್ಫೀ ಟ್ರೈ ಮಾಡಿ. ಕೆಟ್ಟ ಸಿನಿಮಾ‌ ಅಂತೇನೂ ಅನಿಸೋದಿಲ್ಲ.

Comments