Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

BESCOM: ಗ್ರಾಹಕರಿಗೆ ಕರೆಂಟ್ ಶಾಕ್ ಕೊಟ್ಟ ಬೆಸ್ಕಾಂ; ಇನ್ಮುಂದೆ ವಿದ್ಯುತ್ ಬಿಲ್ ಬಾಕಿ ಇದ್ರೆ ಲೈಸೆನ್ಸ್ ಕ್ಯಾನ್ಸಲ್!


BESCOM: ಗ್ರಾಹಕರಿಗೆ ಕರೆಂಟ್ ಶಾಕ್ ಕೊಟ್ಟ ಬೆಸ್ಕಾಂ; ಇನ್ಮುಂದೆ ವಿದ್ಯುತ್ ಬಿಲ್ ಬಾಕಿ ಇದ್ರೆ ಲೈಸೆನ್ಸ್ ಕ್ಯಾನ್ಸಲ್!

ಬೆಸ್ಕಾಂ ಇಲಾಖೆ ಮೂರು ತಿಂಗಳು ಬಿಲ್ ಕಟ್ಟಿಲ್ಲ ಅಂದರೆ ಸಂಪರ್ಕ ಲೈಸೆನ್ಸ್ ರದ್ದು ಹೇಳ್ತಿರೋದು ಜನರ ಕೆಂಗಣ್ಣಿಗೆ ಕಾರಣವಾಗಿದೆ. ಬಿಲ್ ಪಾವತಿ ಮಾಡದ ಸರ್ಕಾರಿ ಸಂಸ್ಥೆಗಳಿಗೂ ಶಾಕ್ ಕೊಟ್ಟಿದೆ.

ವಿದ್ಯುತ್ ಬಿಲ್ (Electricity Bill) ತಿಂಗಳುಗಟ್ಟಲೆ ಕಟ್ಟದೆ ಮುಂದೂಡುತ್ತಾ ಇದ್ದೀರಾ. ಹಾಗಾದರೆ ಇನ್ಮೇಲೆ ಬಿಲ್ ಪಾವತಿ ಪಾವತಿಸುವಲ್ಲಿ ನಿರ್ಲಕ್ಷ್ಯ ಬೇಡವೇ ಬೇಡ. ಒಂದ್ ವೇಳೆ ಮೂರು ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲ (Bill Not Paid) ಅಂದ್ರೆ ಕರೆಂಟ್ (Current) ಇಲ್ಲದೆ ಕತ್ತಲಲ್ಲೇ ಜೀವನ ಮಾಡ್ಬೇಕಾಗುತ್ತೆ. ಮನುಷ್ಯನ ಜೀವಕ್ಕೆ ನೀರು, ಆಹಾರದಷ್ಟೇ ವಿದ್ಯುತ್ ಅಗತ್ಯ ಬಹಳಷ್ಟಿದೆ. ಆದ್ರೆ ವಿದ್ಯುತ್ ಬಳಸಿಕೊಂಡು ಎಷ್ಟೋ ಜನ ವಿದ್ಯುತ್ ಬಿಲ್ ನೇ ಪಾವತಿ ಮಾಡ್ತಿಲ್ಲ. ಇದು ಎಸ್ಮಾಂಗಳ ಸಂಕಷ್ಟಕ್ಕೆ ಕಾರಣವಾಗ್ತಿದೆ.

ಗ್ರಾಹಕರಿಗೆ ಬಿಗ್ ಶಾಕ್ ಕೊಡಲು ಬೆಸ್ಕಾಂ ಚಿಂತನೆ

ಎಷ್ಟೋ ಜನ ವಿದ್ಯುತ್ ಬಿಲ್ ಮುಂದಿನ ತಿಂಗಳು ಕಟ್ಟೋಣವೆಂದು ತಿಂಗಳುಗಟ್ಟಲೆ ಬಿಲ್ ಪಾವತಿಸದೆ ಮುಂದೂಡುತ್ತಾ ವಿದ್ಯುತ್ ಫ್ಲೂಸ್ ತೆಗೆದ ಮೇಲೆ ಬಿಲ್ ಪಾವತಿಸುವ ವಾಡಿಕೆಯನ್ನ ರೂಡಿಸಿಕೊಂಡಿದ್ದಾರೆ.ಆದ್ರೆ ಇನ್ನು ಮುಂದೆ ಇದಕ್ಕೆ ಕಡಿವಾಣ ಹಾಕಲು ಬೆಸ್ಕಾಂ ಮುಂದಾಗ್ತಿದೆ. ಹೌದು.. ಗ್ರಾಹಕರಿಗೆ ಬಿಗ್ ಶಾಕ್ ಕೊಡಲು ಬೆಸ್ಕಾಂ ಮುಂದಾಗಿದೆ.

ವಿದ್ಯುತ್ ಬಿಲ್ ಕಟ್ಟಲು ವಿಳಂಬ ಮಾಡುವವರಿಗೆ ದೊಡ್ಡ ಆಘಾತವೇ ನೀಡ್ತಿದೆ. ಸಾಮಾನ್ಯವಾಗಿ ಅನೇಕರು 2 ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ವಿದ್ಯುತ್ ಬಿಲ್ ಕಟ್ಟುವ ಪದ್ಧತಿಯನ್ನು ರೂಢಿ ಮಾಡಿಕೊಂಡಿರುತ್ತಾರೆ ಅಥವಾ ಕಾರಣಾಂತರಗಳಿಂದ ಕೆಲ ತಿಂಗಳು ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಿರಲ್ಲ. ಈ ವೇಳೆ ಬೆಸ್ಕಾಂ ಅಧಿಕಾರಿಗಳು ಕರೆಂಟ್ ಫ್ಯೂಸ್ ತೆಗೆದು ಹೋಗುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ರೆ ವಿದ್ಯುತ್ ಬಿಲ್ ಕಟ್ಟಲು ವಿಳಂಬ ಮಾಡುವವರಿಗೆ ವಿದ್ಯುತ್ ಸಂಪರ್ಕದ ಲೈಸೆನ್ಸ್ ರದ್ದು ಮಾಡಲು ಬೆಸ್ಕಾಂ ಮುಂದಾಗಿದೆ.

ಇನ್ಮುಂದೆ 3 ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲವೆಂದರೆ ಸಿಬ್ಬಂದಿ ಕರೆಂಟ್ ಫ್ಯೂಸ್ ತೆಗೆಯಲ್ಲ ಬದಲಾಗಿ ನಿಮ್ಮ ಮನೆಯ ‌ವಿದ್ಯುತ್ ಸಂಪರ್ಕದ ಲೈಸೆನ್ಸ್ ನನ್ನೇ ರದ್ದು ಮಾಡ್ತಾರೆ. ವಿದ್ಯುತ್ ಬಾಕಿ ಬಿಲ್ ಸಂಗ್ರಹಕ್ಕೆ ಗ್ರಾಹಕರ ಮೇಲೆ ಬೆಸ್ಕಾಂ ಹೊಸ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಇನ್ಮೇಲೆ 3 ತಿಂಗಳು ವಿದ್ಯುತ್ ಬಿಲ್ ಬಾಕಿ ಇದ್ದರೆ ವಿದ್ಯುತ್ ಸಂಪರ್ಕದ ಒಪ್ಪಂದವೇ ರದ್ದಾಗಲಿದೆ. ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಂಡರೆ ಪುನಃ ಅರ್ಜಿ ಸಲ್ಲಿಸಿ ಹೊಸ ಕನೆಕ್ಷನ್ ತೆಗೆದುಕೊಳ್ಳಲೇಬೇಕು.

ಟ್ವೀಟ್ ಮೂಲಕ ಗ್ರಾಹಕರಿಗೆ ಎಚ್ಚರಿಕೆ

ವಿದ್ಯುತ್ ಬಿಲ್ ಪಾವತಿಸುವಲ್ಲಿ ವಿಳಂಬ ಮಾಡಿದ್ರೆ, ಕರೆಂಟ್ ಇಲ್ಲದೆ ಕತ್ತಲಲ್ಲೇ ಜೀವನ ನಡೆಸುವಂತಹ ಸ್ಥಿತಿ ಉಂಟಾಗಲಿದೆ. ಇನ್ನೂ ತಿಂಗಳಿಗೆ ಸರಿಯಾಗಿ ಬಿಲ್ ಪಾವತಿಸದೆ ನಿರ್ಲಕ್ಷ್ಯ ತೋರುವರರ ವಿರುದ್ಧ ಬೆಸ್ಕಾಂ ಸಮರ ಸಾರಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ನೂತನ ಪ್ರಯೋಗ ಮಾಡುತ್ತಿದೆ. ಈ ಬಗ್ಗೆ ಬೆಸ್ಕಾಂ ಎಂ.ಡಿ  ಮಹಾಂತೇಶ ಬೀಳಗಿ ಕೂಡ ಟ್ವೀಟ್ ಮೂಲಕ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ.

ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಳಿಸುವಂತಹ ತೊಂದರೆ ಬೇಡ ಅಂದರೆ ಸರಿಯಾದ ಟೈಮ್ ಗೆ ವಿದ್ಯುತ್ ಬಿಲ್ ಕಟ್ಟಿ ಎಂದು ಗ್ರಾಹಕರಿಗೆ ಟ್ವೀಟ್ ಮೂಲಕ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮನವಿ ಮಾಡಿದ್ದಾರೆ. ಇನ್ನೂ ಈ  ನಿಯಮವನ್ನ ಗ್ರಾಹಕರು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದ್ರೆ ಕರೆಂಟ್ ಸಂಪರ್ಕ ಲೈಸೆನ್ಸ್ ರದ್ದು ಆಗೋದು ಪಕ್ಕಾ ಅಂತ ಬೆಸ್ಕಾಂ ಜನರಲ್ ಮ್ಯಾನೇಜರ್ ನಾಗರಾಜ್ ಹೇಳ್ತಿದ್ದಾರೆ.  ಸದ್ಯ ಬೆಸ್ಕಾಂ ಈ ನಿರ್ಧಾರ ಚರ್ಚೆಗೆ ಕಾರಣವಾಗಿದೆ.

ಸರ್ಕಾರಿ ಇಲಾಖೆಗಳೇ ಕಟ್ಟಿಲ್ಲ ಕರೆಂಟ್ ಬಿಲ್

ಸರ್ಕಾರಿ ಇಲಾಖೆಗಳು ವರ್ಷಾನುಗಟ್ಟಲೆ ವಿದ್ಯುತ್ ಬಿಲ್ ಕಟ್ಟದೆ ಕೋಟಿ ಗಟ್ಟಲೆ ಬಾಕಿ ಉಳಿಸಿಕೊಂಡ್ರು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ‌. ಆದ್ರೆ ಇದೀಗ ಮೂರು ತಿಂಗಳು ಬಿಲ್ ಕಟ್ಟಿಲ್ಲ ಅಂದರೆ ಸಂಪರ್ಕ ಲೈಸೆನ್ಸ್ ರದ್ದು ಹೇಳ್ತಿರೋದು ಜನರ ಕೆಂಗಣ್ಣಿಗೆ ಕಾರಣವಾಗಿದೆ.

ಪ್ರತ್ಯೇಕ ನೋಟಿಸ್‌ ಜಾರಿ

ಇನ್ನು ಕೆಟ್ಟ ಮೇಲೆ ಬುದ್ದಿ ಬಂತು ಅನ್ನೊ ಹಾಗೆ ಇದೀಗ ಎಚ್ಚೆತ್ತ ಬೆಸ್ಕಾಂ, ಬಿಲ್ ಪಾವತಿ ಮಾಡದ ಸರ್ಕಾರಿ ಸಂಸ್ಥೆಗಳಿಗೂ ಶಾಕ್ ಕೊಟ್ಟಿದೆ. ಬಿಡ್ಬ್ಲೂ ಎಸ್‌ಎಸ್‌ ಬಿ, ಬಿಡಿಎ, ಬಿಬಿಎಂಪಿ, ತೋಟಗಾರಿಕೆ ಇಲಾಖೆ, ನಗರ ಸಭೆ, ಗ್ರಾಮಸಭೆಗಳಿಗೆ ಬೆಸ್ಕಾಂನ ಹೆಬ್ಬಾಳ ಮತ್ತು ಜಾಲಹಳ್ಳಿ ವಿಭಾಗಗಳ ಕಾರ್ಯನಿರ್ವಾಹಕ ಇಂಜಿನಿಯರ್‌ ಗಳಿಂದ ಪ್ರತ್ಯೇಕ ನೋಟಿಸ್‌ ಜಾರಿ ಮಾಡಿದೆ. ಬಿಡ್ಬ್ಲೂ ಎಸ್‌ ಎಸ್‌ ಬಿ ಅತೀ ಹೆಚ್ಚು  ಬಾಕಿ ಉಳಿಸಿಕೊಂಡಿದೆ ಬರೋಬ್ಬರಿ 65.09 ಕೋಟಿ ರೂ. ಪಾವತಿಸಬೇಕಿದೆ.
ಇನ್ಮುಂದೆ 3 ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲವೆಂದರೆ ಸಿಬ್ಬಂದಿ ಕರೆಂಟ್ ಫ್ಯೂಸ್ ತೆಗೆಯಲ್ಲ ಬದಲಾಗಿ ನಿಮ್ಮ ಮನೆಯ ‌ವಿದ್ಯುತ್ ಸಂಪರ್ಕದ ಲೈಸೆನ್ಸ್ ನನ್ನೇ ರದ್ದು ಮಾಡ್ತಾರೆ. ವಿದ್ಯುತ್ ಬಾಕಿ ಬಿಲ್ ಸಂಗ್ರಹಕ್ಕೆ ಗ್ರಾಹಕರ ಮೇಲೆ ಬೆಸ್ಕಾಂ ಹೊಸ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಇನ್ಮೇಲೆ 3 ತಿಂಗಳು ವಿದ್ಯುತ್ ಬಿಲ್ ಬಾಕಿ ಇದ್ದರೆ ವಿದ್ಯುತ್ ಸಂಪರ್ಕದ ಒಪ್ಪಂದವೇ ರದ್ದಾಗಲಿದೆ. ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಂಡರೆ ಪುನಃ ಅರ್ಜಿ ಸಲ್ಲಿಸಿ ಹೊಸ ಕನೆಕ್ಷನ್ ತೆಗೆದುಕೊಳ್ಳಲೇಬೇಕು.

Comments